ಕರ್ನಾಟಕ

karnataka

ETV Bharat / bharat

ಮೆಹುಲ್ ಚೋಕ್ಸಿಯ ಹಕ್ಕನ್ನು ನಾವು ಗೌರವಿಸುತ್ತೇವೆ : ಡೊಮಿನಿಕಾ ಪ್ರಧಾನಿ ರೂಸ್​​ವೆಲ್ಟ್​ - ಭಾರತ ನಾಗರಿಕನ ಪ್ರಕರಣ.

ಭಾರತ ಪ್ರಜೆಯ ಪ್ರಕರಣ ಸದ್ಯ ನ್ಯಾಯಾಲಯದ ಮುಂದಿದೆ. ನ್ಯಾಯಾಲಯದ ಪ್ರಕ್ರಿಯೆಗಳು ಮುಂದುವರೆಯಲು ನಾವು ಸಹಕರಿಸುತ್ತೇವೆ. ಆದರೆ, ಈ ವಿಚಾರವಾಗಿ ಹೆಚ್ಚಿನ ಸಾರ್ವಜನಿಕ ಹೇಳಿಕೆ ನೀಡಲು ನಾನು ಇಚ್ಛಿಸುವುದಿಲ್ಲ ಎಂದು ಪ್ರಧಾನಿ ಸ್ಕೆಟರಿ ಹೇಳಿದ್ದಾರೆ..

ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

By

Published : Jun 8, 2021, 9:03 PM IST

ನವದೆಹಲಿ :ಭಾರತೀಯ ಪ್ರಜೆ ಮೆಹುಲ್ ಚೋಕ್ಸಿ ಅವರ ಹಕ್ಕುಗಳನ್ನು ನಾವು ಗೌರವಿಸುತ್ತೇವೆ ಮತ್ತು ಮುಂದಿನ ಕ್ರಮಗಳ ಕುರಿತು ನ್ಯಾಯಾಲಯ ತೀರ್ಮಾನಿಸಲಿದೆ ಎಂದು ಡೊಮಿನಿಕಾ ಪ್ರಧಾನಿ ರೂಸ್​​ವೆಲ್ಟ್​ ಸ್ಕೆಟರಿ ಹೇಳಿದ್ದಾರೆ.

13,500 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾದ ವಜ್ರ ವ್ಯಾಪಾರಿ ಚೋಕ್ಸಿ, ಆಂಟಿಗುವಾ ಮತ್ತು ಬಾರ್ಬುಡಾದಿಂದ ಕಣ್ಮರೆಯಾದ ಬಳಿಕ ಮೇ 23ರಂದು ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು.

ಇದೀಗ ಚೋಕ್ಸಿಯ ವಿಚಾರಣೆ ಹಾಗೂ ಭಾರತ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ಈ ನಡುವೆ ಅವರ ಎಲ್ಲಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಡೊಮಿನಿಕಾ ಪ್ರಧಾನಿ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.

ಭಾರತ ನಾಗರಿಕನ ಪ್ರಕರಣ ಸದ್ಯ ನ್ಯಾಯಾಲಯದ ಮುಂದಿದೆ. ನ್ಯಾಯಾಲಯದ ಪ್ರಕ್ರಿಯೆಗಳು ಮುಂದುವರೆಯಲು ನಾವು ಸಹಕರಿಸುತ್ತೇವೆ. ಆದರೆ ಈ ವಿಚಾರವಾಗಿ ಹೆಚ್ಚಿನ ಸಾರ್ವಜನಿಕ ಹೇಳಿಕೆ ನೀಡಲು ನಾನು ಇಚ್ಛಿಸುವುದಿಲ್ಲ ಎಂದು ಪ್ರಧಾನಿ ಸ್ಕೆಟರಿ ಹೇಳಿದ್ದಾರೆ.

ಓದಿ:ಆಧಾರ್​​ನೊಂದಿಗೆ PANಕಾರ್ಡ್ ಲಿಂಕ್ ಮಾಡಲು ಗ್ರಾಹಕರಿಗೆ ಹೊಸ ಗಡುವು ನೀಡಿದ ಎಸ್​ಬಿಐ

ABOUT THE AUTHOR

...view details