ಕರ್ನಾಟಕ

karnataka

ETV Bharat / bharat

ಅಷ್ಟಿಷ್ಟಲ್ಲ ಫುಟ್ಬಾಲ್​​​​ ಗಾತ್ರದ ಮೂತ್ರಪಿಂಡದ ಗಡ್ಡೆ ಹೊರತೆಗೆದ ವೈದ್ಯರು - ಎಐಎನ್‌ಯುನ ವೈದ್ಯರು

ಎಐಎನ್‌ಯುನ ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿದ್ದ ಮೂತ್ರಪಿಂಡದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಇದು 10 ಕೆಜಿ ತೂಕವಿದ್ದು, ಫುಟ್ಬಾಲ್​ ಗಾತ್ರದಲ್ಲಿತ್ತು.

ಫುಟ್‌ಬಾಲ್ ಗಾತ್ರದ ಮೂತ್ರಪಿಂಡದ ಗೆಡ್ಡೆ
ಫುಟ್‌ಬಾಲ್ ಗಾತ್ರದ ಮೂತ್ರಪಿಂಡದ ಗೆಡ್ಡೆ

By

Published : Nov 17, 2022, 2:25 PM IST

ಹೈದರಾಬಾದ್: ಇಲ್ಲಿನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ (ಎಐಎನ್‌ಯು) ವೈದ್ಯರು, 53 ವರ್ಷದ ವ್ಯಕ್ತಿಯ ಮೂತ್ರಪಿಂಡದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಹಾಕಿದ್ದಾರೆ. ಈ ಗೆಡ್ಡೆಯೂ 10 ಕೆಜಿ ತೂಕವಿದ್ದು, ಫುಟ್‌ಬಾಲ್​ನಷ್ಟು ಗಾತ್ರವಿತ್ತು. ಇದು ತೆಲುಗು ರಾಜ್ಯದಲ್ಲಿ ನಡೆದ ಮೊದಲ ಶಸ್ತ್ರಚಿಕಿತ್ಸೆ ಆಗಿದೆ.

ಡಾ.ತೈಫ್ ಬೆಂಡಿಗೇರಿ ಮತ್ತು ಡಾ.ರಾಜೇಶ್ ಕೆ.ರೆಡ್ಡಿ ಸೇರಿದಂತೆ ಡಾ.ಮಲ್ಲಿಕಾರ್ಜುನ್​​​ ಸಿ ನೇತೃತ್ವದ ಮೂತ್ರಶಾಸ್ತ್ರಜ್ಞರ ತಂಡವು ಶಸ್ತ್ರಚಿಕಿತ್ಸೆ ಮಾಡಿದೆ. ವೈದ್ಯರ ಪ್ರಕಾರ, ರೋಗಿಯು ಕಡಪಾ ನಿವಾಸಿಯಾಗಿದ್ದಾರೆ. ಅವರು ಹೊಟ್ಟೆಯಲ್ಲಿ ಊತವಾಗಿದ್ದರಿಂದ AINUಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ಪತ್ತೆ ಹಚ್ಚಿದರು. ಎಡಭಾಗದ ಮೂತ್ರಪಿಂಡದಲ್ಲಿ ಗಡ್ಡೆ ಹುಟ್ಟಿಕೊಂಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸಾಗರ: ಮಹಿಳೆ ಹೊಟ್ಟೆಯಲ್ಲಿದ್ದ 7 ಕೆಜಿ ಗೆಡ್ಡೆ ಹೊರ ತೆಗೆದ ವೈದ್ಯರು

ಗಡ್ಡೆಯ ಗಾತ್ರದ ದೃಷ್ಟಿಯಿಂದ ವೈದ್ಯರು ರೊಬೊಟಿಕ್ ವಿಧಾನವನ್ನು ಬಳಸದೇ, ತೆರೆದ ಶಸ್ತ್ರಚಿಕಿತ್ಸೆ ಆರಿಸಿಕೊಂಡಿದ್ದಾರೆ. ಬಳಿಕ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ, ಗಡ್ಡೆ ಫುಟ್‌ಬಾಲ್ ನಷ್ಟು ದೊಡ್ಡದಾಗಿತ್ತು.

ಎಐಎನ್‌ಯುನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ.ಪೂರ್ಣಚಂದ್ರ ರೆಡ್ಡಿ ಅವರ ಪ್ರಕಾರ, ಪ್ರಪಂಚದಾದ್ಯಂತ ಮೂತ್ರ ಕ್ಯಾನ್ಸರ್‌ಗಳು ಹೆಚ್ಚುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯತೆ ಇದೆ. ಇದು ಸರ್ಜಿಕಲ್ ರೋಬೋಟ್ ಮತ್ತು ಲ್ಯಾಪರೊಸ್ಕೋಪಿಯೊಂದಿಗೆ ಸುಸಜ್ಜಿತವಾಗಿದೆ. ಕೀ-ಹೋಲ್‌ಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details