ತಿರುಪತಿ/ಆಂಧ್ರಪ್ರದೇಶ :ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು 3 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ. ಹರಕೆಯಾಗಿ ತಿಮ್ಮಪ್ಪನ ಅಂಗೈಗಳನ್ನು ಅಲಂಕರಿಸಲು ರತ್ನಖಚಿತ ಚಿನ್ನದ ಕೈಗವಸುಗಳನ್ನು ನೀಡಿದ್ದಾರೆ.
ಈ ಚಿನ್ನದ ಕೈಗವಸುಗಳು ಸುಮಾರು 5 ಕೆ.ಜಿ ತೂಕವಿದ್ದು, ತಿರುಮಲ ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ. ತಿರಮಲದಲ್ಲೇ ನೆಲೆಸಿರುವ ಕುಟುಂಬವು ಈ ಚಿನ್ನಾಭರಣಗಳನ್ನು ನೀಡಿದೆ ಎನ್ನಲಾಗಿದ್ದು, ಭಕ್ತರು ಯಾರೆಂಬುದನ್ನು ಗೌಪ್ಯವಾಗಿಡಲಾಗಿದೆ. ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಆಭರಣಗಳನ್ನು ಟಿಟಿಡಿಗೆ ಹಸ್ತಾಂತರಿಸಲಾಯಿತು.