ದಿಯೋಘರ್(ಜಾರ್ಖಂಡ್):ತ್ರಿಕೂಟ ಪರ್ವತ ರೋಪ್‌ವೇ ಅಪಘಾತದ ನಂತರ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸಲು ಇಂದು ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ. ಬೆಳಗ್ಗೆ 8 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಹೆಲಿಕಾಪ್ಟರ್ ಮೂಲಕ ಜನರನ್ನು ರಕ್ಷಿಸಿ ಕರೆತರುವ ಕಾರ್ಯಾಚರಣೆಯನ್ನು ಸೇನೆ ಮಾಡುತ್ತಿದೆ.
ಮುಂದುವರಿದ ಕಾರ್ಯಾಚರಣೆ:ಸೋಮವಾರ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ರಾತ್ರಿಯಾದ್ದರಿಂದ ಸ್ಥಗಿತಗೊಳಿಸಲಾಗಿತ್ತು. ರೋಪ್ ವೇಯ ಟ್ರಾಲಿಯಲ್ಲಿ ಇನ್ನು 14 ಮಂದಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಏಪ್ರಿಲ್ 11 ರ ಬೆಳಗ್ಗೆ 7:30 ಕ್ಕೆ ವಾಯುಪಡೆಯ ಗರುಡ್ ಕಮಾಂಡೋಗಳ ತಂಡವು MI-17 ಮತ್ತು MI-17 V5 ಚಾಪರ್‌ಗಳ ಸಹಾಯದಿಂದ 32 ಜನರನ್ನು ರಕ್ಷಿಸಿದೆ. ಆದರೆ ಸಂಜೆ ವೇಳೆ ದುರಂತ ಘಟನೆಯೊಂದು ನಡೆದಿದೆ. ಚಾಪರ್‌ನಲ್ಲಿ ಪ್ರವಾಸಿಗರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವಾಗ, ಅವರ ಸುರಕ್ಷತಾ ಬೆಲ್ಟ್ ತೆರೆದು ಕೆಳಗಿನ ಕಂದಕಕ್ಕೆ ಬಿದ್ದಿರುವ ಘಟನೆ ಎಲ್ಲರ ಎದೆ ಝುಮ್ಮೆನ್ನಿಸುವಂತೆ ಮಾಡಿತು.
ಅವರಿಗೆ ನೀರು-ಆಹಾರ ಹೇಗೆ?:ನಾಲ್ಕು ಟ್ರಾಲಿಗಳಲ್ಲಿ ಒಟ್ಟು 14 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ನೀರು ಅಥವಾ ಯಾವುದೇ ರೀತಿಯ ಉಪಹಾರ ವ್ಯವಸ್ಥೆ ಮಾಡಲು ಸಾಧ್ಯವಾಗಿದೆಯೋ ಅಥವಾ ಇಲ್ಲವೋ ಎಂಬುದು ಪ್ರಶ್ನೆಯಾಗಿತ್ತು. ಆದ್ರೆ ರಕ್ಷಣಾ ಕಾರ್ಯದಲ್ಲಿಯೇ ವಾಯುಪಡೆ ತಂಡವು ಟ್ರಾಲಿಗಳಲ್ಲಿ ಸಿಲುಕಿರುವ ಪ್ರವಾಸಿಗರಿಗೆ ನೀರು ಮತ್ತು ತಿಂಡಿಗಳನ್ನು ಒದಗಿಸುತ್ತಿದೆ ಎಂದು ದಿಯೋಘರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜುನಾಥ ಭಜಂತ್ರಿ ತಿಳಿಸಿದ್ದಾರೆ.
ಮೇಲಿಂದ ಬಿದ್ದು ವ್ಯಕ್ತಿ ಸಾವು: ಏಪ್ರಿಲ್ 11ರ ಸಂಜೆಯೊಳಗೆ ಎಲ್ಲ ಪ್ರವಾಸಿಗರನ್ನು ಸ್ಥಳಾಂತರಿಸುವ ಗುರಿ ಹೊಂದಿದ್ದರೂ ಸಾಧ್ಯವಾಗಿಲ್ಲ. ಪರ್ವತದ ಭೂವಿನ್ಯಾಸ ಕಷ್ಟವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಕಷ್ಟು ತೊಂದರೆಯಾಗುತ್ತಿದೆ. ಏಪ್ರಿಲ್ 12ರ ಬೆಳಗ್ಗೆ ಕಾರ್ಯಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಉಳಿದ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಓದಿ:ಜಾರ್ಖಂಡ್ ರೋಪ್‌ವೇ ದುರಂತ: ರಕ್ಷಣೆ ವೇಳೆ ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು
ದಿನವಿಡೀ ಕಾರ್ಯಾಚರಣೆ:ದಿನವಿಡೀ ನಡೆದ ಕಾರ್ಯಾಚರಣೆಯಲ್ಲಿ ವಿವಿಧ ಟ್ರಾಲಿಗಳಿಂದ 32 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಸಂಜೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ನಾಲ್ಕು ಟ್ರಾಲಿಗಳಲ್ಲಿ ಸುಮಾರು 14 ಮಂದಿ ಸಿಕ್ಕಿಬಿದ್ದಿದ್ದಾರೆ. ಏಪ್ರಿಲ್ 10 ರಂದು ಅಪಘಾತ ಸಂಭವಿಸಿದ್ದರಿಂದ ಇಡೀ ಜಿಲ್ಲಾಡಳಿತವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಅಪಘಾತದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟ್ರಾಲಿಯಲ್ಲಿ ಸಿಕ್ಕಿಬಿದ್ದ ಕಮಾಂಡೋ: ವಾಯುಪಡೆಯ ಗರುಡ ಕಮಾಂಡೋವೊಬ್ಬರು ಟ್ರಾಲಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ರಕ್ಷಣೆ ಮಾಡಲು ಟ್ರಾಲಿಯಲ್ಲಿ ಇಳಿದರು. ಈ ಸಮಯದಲ್ಲಿ ಕತ್ತಲೆಯಿಂದಾಗಿ ಎರಡೂ ಕಾಪ್ಟರ್ಗಳು ಮುನ್ನಡೆದವು. ಇದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕಂದ್ರೆ ಟ್ರಾಲಿಯಲ್ಲಿ ಸಿಕ್ಕಿಬಿದ್ದಿರುವ ಗರುಡ ಕಮಾಂಡೋ ರಾತ್ರಿಯಿಡೀ ಇತರ ಟ್ರಾಲಿಗಳಲ್ಲಿ ಸಿಕ್ಕಿಬಿದ್ದ ಪ್ರವಾಸಿಗರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.