ನವದೆಹಲಿ:ಬಂಧಿತ ಶಂಕಿತ ಭಯೋತ್ಪಾದಕ ಮೊಹಮ್ಮದ್ ಅಶ್ರಫ್ನನ್ನು ದೆಹಲಿ ಪೊಲೀಸರ ವಿಶೇಷ ತಂಡ ವಿಚಾರಣೆಗೊಳಪಡಿಸಿದ್ದು, 2018 ರಲ್ಲಿ ದುಬೈ ಮತ್ತು ಥಾಯ್ಲೆಂಡ್ಗೆ ಭೇಟಿ ನೀಡಿದ್ದಾಗ ಐಎಸ್‌ಐ ಕಾರ್ಯಕರ್ತರನ್ನು ಭೇಟಿಯಾಗಿರುವುದನ್ನು ಈತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಶ್ರಫ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ (ಐಎಸ್‌ಐ) ಕಾರ್ಯಕರ್ತರನ್ನು ಭೇಟಿಯಾಗಿದ್ದು, ಜಮ್ಮು- ಕಾಶ್ಮೀರ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳ ಫೋಟೊ, ವಿಡಿಯೋಗಳು ಮತ್ತು ಸ್ಥಳದ ಕೆಲವು ನಕ್ಷೆಗಳನ್ನು ಹಂಚಿಕೊಂಡಿದ್ದಾನೆ. ನಕಲಿ ಪಾಸ್‌ಪೋರ್ಟ್ ಬಳಸಿ ಎರಡೂ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೆಲ್ ಹೊರತಾಗಿ ಐಬಿ, ಮಿಲಿಟರಿ ಇಂಟಲಿಜೆನ್ಸ್, ಜಮ್ಮು - ಕಾಶ್ಮೀರ ಪೊಲೀಸ್ ಮತ್ತು ಎನ್ಐಎ ಅಧಿಕಾರಿಗಳು ಕೂಡ ಅಶ್ರಫ್ನನ್ನು 6 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ತಪ್ಪೊಪ್ಪಿಕೊಂಡ ಆರೋಪಿ
ತಾನು 2014 ರಲ್ಲಿ ಬಾಂಗ್ಲಾದೇಶದ ಮೂಲಕ ಭಾರತವನ್ನು ಪ್ರವೇಶಿಸಿದ್ದೆ. ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳೊಂದಿಗೆ ಸಂಪರ್ಕ ಹೊಂದಿದ್ದೇನೆ. ನಕಲಿ ದಾಖಲೆಗಳನ್ನು ಬಳಿಸಿ ದುಬೈಗೆ ಭೇಟಿ ನೀಡಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ.
2005 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಲ್ಲಿ ಪಾಕಿಸ್ತಾನದ ಅಧಿಕಾರಿ ನಾಸಿರ್ನಿಂದ ತರಬೇತಿ ಪಡೆದಿದ್ದೆ. ತರಬೇತಿಯ ನಂತರ 2014 ರಲ್ಲಿ ಬಿಹಾರಕ್ಕೆ ನಕಲಿ ಪಾಸ್‌ಪೋರ್ಟ್ ಮೂಲಕ ಕಳುಹಿಸಲಾಯಿತು ಎಂದು ಬಾಯ್ಬಿಟ್ಟಿದ್ದಾನೆ.
ಏನಿದು ಘಟನೆ?
ಪಾಕಿಸ್ತಾನದ ಪಂಜಾಬ್ ಮೂಲದ ಶಂಕಿತ ಉಗ್ರ ಅಶ್ರಫ್, ದೆಹಲಿ ಮೇಲೆ ದಾಳಿ ನಡೆಸಲು ಐಎಸ್‌ಐ ಆದೇಶದಂತೆ ಕೆಲಸ ಮಾಡುತ್ತಿದ್ದನು. ಆರೋಪಿಯನ್ನು ಲಕ್ಷ್ಮಿ ನಗರದ ರಮೇಶ್ ಪಾರ್ಕ್ನಲ್ಲಿ ಬಂಧಿಸಲಾಗಿತ್ತು. ಈತ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ -47, ಗ್ರೆನೇಡ್ ಮತ್ತು ನಕಲಿ ಭಾರತೀಯ ಐಡಿ ಹೊಂದಿದ್ದನು. ಕಳೆದ 10 ವರ್ಷಗಳಿಂದ ರಾಷ್ಟ್ರದಾದ್ಯಂತ ಅಜ್ಮೀರ್, ದೆಹಲಿ, ವೈಶಾಲಿ ಮತ್ತು ಉಧಮ್ ನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತನ್ನ ಅಡಗುತಾಣವನ್ನು ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದ್ರೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್: ಪಾಕ್ಗೆ ಅಮಿತ್ ಶಾ ಎಚ್ಚರಿಕೆ