ನವದೆಹಲಿ: ಗಾಂಧಿನಗರ - ಮುಂಬೈ ರೈಲು ಮಾರ್ಗದಲ್ಲಿ ಇತ್ತೀಚೆಗೆ ವಂದೇ ಭಾರತ್ ರೈಲಿನಡಿ ದನಕರುಗಳು ಸಿಲುಕಿ ಸಾವಿಗೀಡಾದ ಕೆಲ ಘಟನೆಗಳೂ ಸೇರಿದಂತೆ ಒಟ್ಟಾರೆಯಾಗಿ ಜಾನುವಾರುಗಳಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು, 1 ಸಾವಿರ ಕಿಲೋ ಮೀಟರ್ ರೈಲು ಮಾರ್ಗದ ಪಕ್ಕದಲ್ಲಿ ಮುಂದಿನ ಆರು ತಿಂಗಳೊಳಗಾಗಿ ಆವರಣ ಗೋಡೆ ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆವರಣ ಗೋಡೆ ನಿರ್ಮಿಸುವ ವಿಷಯದಲ್ಲಿ ನಾವು ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಎರಡು ವಿಭಿನ್ನ ವಿನ್ಯಾಸಗಳನ್ನು ಪರಿಶೀಲಿಸಲಾಗುತ್ತಿದೆ. ಇದರಲ್ಲೊಂದು ವಿನ್ಯಾಸವನ್ನು ಅನುಮೋದಿಸಲಾಗಿದ್ದು, ಈ ವಿನ್ಯಾಸದ ಗೋಡೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಮುಂದಿನ ಐದರಿಂದ ಆರು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ 1,000 ಕಿಮೀ ಗೋಡೆ ನಿರ್ಮಿಸಲು ಯೋಜಿಸಿದ್ದೇವೆ ಎಂದು ವೈಷ್ಣವ್ ಹೇಳಿದರು. ಸಾಮಾನ್ಯ ಆವರಣ ಗೋಡೆಗಳು ಜಾನುವಾರುಗಳ ಸಮಸ್ಯೆಯನ್ನು ತಡೆಯುವ ಬದಲಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಮಸ್ಯೆಯುಂಟು ಮಾಡುತ್ತವೆ.