ಕರ್ನಾಟಕ

karnataka

ETV Bharat / bharat

ಡಾರ್ಜಿಲಿಂಗ್ ಪ್ರವಾಸಕ್ಕೆ ಸಿದ್ಧಗೊಂಡಿದೆ ‘ಟಾಯ್ ಟ್ರೈನ್’...ಪ್ರವಾಸಿಗರಿಗೆ ಮುದನೀಡಲಿದೆ ಜಾಲಿ ರೈಡ್

ಡಾರ್ಜಿಲಿಂಗ್ ಪ್ರದೇಶದಲ್ಲಿ ಕೋವಿಡ್ ನಂತರ ಇದೀಗ ಪ್ರವಾಸಿ ತಾಣಗಳು ಮತ್ತೆ ಆರಂಭವಾಗುತ್ತಿವೆ. ಇಲ್ಲಿನ ಪ್ರಸಿದ್ಧ ಟಾಯ್ ಟ್ರೈನ್ ಸೇವೆಯೂ ಸದ್ಯದಲ್ಲೇ ಆರಂಭವಾಗುವ ಸುಳಿವು ಸಿಕ್ಕಿದ್ದ, ಪ್ರವಾಸಿಗರಿಗೆ ರಸದೌತಣ ಸಿಗಲಿದೆ..

darjeeling-himalayan-railway-is-now-widely-popular-among-the-tourists
ಪ್ರವಾಸಿಗರಿಗೆ ಮುದನೀಡಲಿದೆ ಜಾಲಿ ರೈಡ್

By

Published : Jul 11, 2021, 6:12 AM IST

ಡಾರ್ಜಿಲಿಂಗ್​​ (ಪಶ್ಚಿಮ ಬಂಗಾಳ): ಟಾಯ್​ ಟ್ರೈನ್​​ ಈ ಶಬ್ದ ನಮ್ಮ ಕಿವಿಗೆ ಬೀಳುತ್ತಿದ್ದಂತೆ ಥಟ್ ಅಂತ ನೆನಪಿಗೆ ಬರೋದು ಜಾಲಿ ರೈಡ್ ಹೋಗುತ್ತಿದ್ದ ದಿನಗಳು. ಇದೇ ರೀತಿ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಪ್ರವಾಸಿಗರ ಸೆಳೆಯಲು ಹೊಸ ಪ್ರಯೋಗಕ್ಕೆ ಇಳಿದಿದ್ದು, ಹಲವು ಭಾಗದಲ್ಲಿ ಟಾಯ್ ಟ್ರೈನ್ ಓಡಿಸಲು ಮುಂದಾಗಿದೆ.

ಉತ್ತರ ಬಂಗಾಳದ ಜೊತೆಗೆ, ರಾಜ್ಯದ ಪ್ರವಾಸೋದ್ಯಮವು ಭಾರಿ ಬದಲಾವಣೆಯನ್ನು ಕಂಡಿದೆ. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಪ್ರವಾಸಿ ತಾಣಗಳು ಕಳೆದ ಒಂದು ವರ್ಷದಿಂದ ಮುಚ್ಚಿವೆ.

ಡಾರ್ಜಿಲಿಂಗ್ ಪ್ರವಾಸಕ್ಕೆ ಸಿದ್ಧಗೊಂಡಿದೆ ‘ಟಾಯ್ ಟ್ರೈನ್’

ಇದಕ್ಕೂ ಮೊದಲು ಬೆಟ್ಟಗಳ ಕುಸಿತದಿಂದಾಗಿ ಮೂರ್ನಾಲ್ಕು ವರ್ಷಗಳ ಕಾಲ ಟಾಯ್​ ಟ್ರೈನ್ ಪ್ರಯಾಣ ರದ್ದು ಮಾಡಲಾಗಿತ್ತು. ಆದರೆ, ಇಂತಹ ಸವಾಲುಗಳ ನಡುವೆಯೂ ಇದೀಗ ಮತ್ತೆ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇದರಿಂದ ಪ್ರವಾಸೋದ್ಯಮ ಮತ್ತೆ ಜೀವ ತಳೆಯಲಿದೆ.

ಕೋವಿಡ್​ನಿಂದಾಗಿ ರೈಲು ಸೇವೆ ಬಂದ್ ಆಗಿತ್ತು. ಇದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಬಂದು ವಾಪಸಾಗುತ್ತಿದ್ದಾರೆ. ಹೀಗಾಗಿ, ಸುಂದರ ಟಾಯ್ ಟ್ರೈನ್ ಲೋಕೊಶೆಡ್ ಒಳಗೆ ತುಕ್ಕು ಹಿಡಿಯುತ್ತಿತ್ತು. ಕೊರೊನಾ ವೈರಸ್​ನ ಹೊಡೆತದ ನಡುವೆಯೂ ಟಾಯ್​ ಟ್ರೈನ್ ಮಾರ್ಗಗಳ ಪುನರ್ ಆರಂಭಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರವಾಸಿಗರಿಗೆ ಸದ್ಯದಲ್ಲೇ ಡಾರ್ಜಿಲಿಂಗ್ ಎಂಬ ಭೂಮಿ ಮೇಲಿನ ಸ್ವರ್ಗವನ್ನ ಜಾಲಿ ರೈಡ್​ನಲ್ಲಿ ಕಣ್ತುಂಬಿಕೊಳ್ಳಬಹುದು.

ABOUT THE AUTHOR

...view details