ಬಾಪಟ್ಲಾ, ಆಂಧ್ರಪದೇಶ:ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೆಡೆ ಕೊಲೆ, ಆತ್ಮಹತ್ಯೆ, ಹಲ್ಲೆ, ಆ್ಯಸಿಡ್ ದಾಳಿ, ಪೆಟ್ರೋಲ್ ದಾಳಿ ಹೆಚ್ಚುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಏಲೂರಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವಿವಾಹಿತ ಮಹಿಳೆ ಮೇಲೆ ಅಪರಿಚಿತರು ಆ್ಯಸಿಡ್ ದಾಳಿ ನಡೆಸಿದಿದ್ದರು. ಈ ಘಟನೆ ಮಾಸುವ ಮುನ್ನವೇ ಬಾಪಟ್ಲಾ ಜಿಲ್ಲೆಯಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ (Student Burnt alive).
10ನೇ ತರಗತಿ ವಿದ್ಯಾರ್ಥಿ ಅಮರನಾಥ್ ಮೇಲೆ ಸ್ನೇಹಿತರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಟ್ಯೂಷನ್‌ಗೆ ಹೋಗುತ್ತಿದ್ದಾಗ ಬಾಲಕನ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಇತರ ಕೆಲವರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಮರನಾಥ್ ಅವರನ್ನು ಗುಂಟೂರು ಜಿಜಿಎಚ್‌ಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಡಿಟೇಲ್ಸ್ಗೆ ಬರೋದಾದ್ರೆ.. ಚೆರುಕುಪಲ್ಲಿ ತಾಲೂಕಿನ ರಾಜೋಲು ಪಂಚಾಯತ್ ವ್ಯಾಪ್ತಿಯ ಉಪ್ಪಳವಾರಿಪಾಲೆಂನ ಉಪ್ಪಳ ಅಮರನಾಥ್ ಸ್ಥಳೀಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾನೆ. ನಿತ್ಯ ಬೆಳಗ್ಗೆ ರಾಜೋಲುವಿಗೆ ಟ್ಯೂಷನ್‌ಗೆ ಹೋಗಿ ಬರುತ್ತಿದ್ದರು. ಶುಕ್ರವಾರ ಬೆಳಗ್ಗೆಯೂ ಎಂದಿನಂತೆ ಅಮರನಾಥ್ ಟ್ಯೂಷನ್‌ಗೆ ಹೋಗಿ ಬರುತ್ತಿದ್ದರು. ಈ ವೇಳೆ ಸ್ನೇಹಿತ ವೆಂಕಟೇಶ್ವರ ರೆಡ್ಡಿ ಕೆಲವರ ಜೊತೆ ಸೇರಿ ಮಾರ್ಗಮಧ್ಯೆ ಅವರನಾಥ್ನನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ, ರೆಡ್ಲಪಾಲೆಂನಲ್ಲಿ ಅಮರನಾಥ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.