ನವದೆಹಲಿ: ದೇಶದಲ್ಲಿ ನಿಧಾನವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಸೋಂಕಿನ ಉಲ್ಬಣತೆ ಕಾಣಬಹುದಾಗಿದೆ. ಒಂದೇ ದಿನದಲ್ಲಿ 10, 158 ಹೊಸ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ, ಒಂದೇ ದಿನದಲ್ಲಿ ಇದರ ಹೆಚ್ಚಳ ಶೇ 30ರಷ್ಟು ಕಾಣಬಹುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಪ್ರಸ್ತುತ 44,998 ಪ್ರಕರಣಗಳು ಕ್ರಿಯಾಶೀಲವಾಗಿದೆ.
ದೇಶದಲ್ಲಿ ಹೊಸ ಸೋಂಕುಗಳು ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು 4,42,10,127 ದಾಖಲಾಗಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರವು ಶೇ 4.42ರಷ್ಟು ವರದಿಯಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಶೇ 4.02ರಷ್ಟಿದೆ. ಸಕ್ರಿಯ ಪ್ರಕರಣಗಳು ಶೇ 0.10ರಷ್ಟಿದೆ.
ದೇಶದಲ್ಲಿ ಸೋಂಕಿನ ಚೇತರಿಕೆ ಪ್ರಮಾಣವು ಶೇ 98.71ರಷ್ಟು ದಾಖಲಾಗಿದೆ. ಕೋವಿಡ್ ಪ್ರಕರಣದ ಸಾವಿನ ಪ್ರಮಾಣವು ಶೇ 1.19ರಷ್ಟು ದಾಖಲಾಗಿದೆ. ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ಹಂತವನ್ನು ಪ್ರವೇಶಿಸಿದ್ದು, ಮುಂದಿನ 10-12 ದಿನಗಳವರೆಗೆ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಬಳಿಕ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಸೋಂಕಿನ ಹೆಚ್ಚಳ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಹೊಸ ಕೋವಿಡ್ ಪ್ರಕರಣಗಳು ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 1, 149 ಪ್ರಕರಣಗಳು ದಾಖಲಾಗಿದೆ. ದೆಹಲಿಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣ 3,347 ಆಗಿದ್ದು, ಪಾಸಿಟಿವಿಟಿ ದರ ಶೇ 23.8 ರಷ್ಟಿದೆ. ದೆಹಲಿಯಲ್ಲಿ ಒಂದು ಸಾವು ಪ್ರಕರಣ ವರದಯಾಗಿದೆ. ಆದರೆ ಸಾವಿಗೆ ಪ್ರಾಥಮಿಕ ಕಾರಣ ಕೋವಿಡ್ ಸೋಂಕು ಆಗಿಲ್ಲ. ದೆಹಲಿ ಆರೋಗ್ಯ ಇಲಾಖೆ ಅನುಸಾರ 677 ಕೋವಿಡ್ ರೋಗಿಗಳು ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಚೇತರಿಕೆ ಕಂಡಿದ್ದು, ರಾಜ್ಯದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ 19, 87, 357 ಆಗಿದೆ.