ಶ್ರೀನಗರ: ಕೋವಿಡ್ -19 ಪ್ರಕರಣಗಳ ಹೆಚ್ಚಳ ನಿಭಾಯಿಸುವ ಉದ್ದೇಶದಿಂದ ಇಂದು ಸಂಜೆ ಆರಂಭಗೊಂಡು ಜಮ್ಮು ಮತ್ತು ಕಾಶ್ಮೀರದ 11 ಜಿಲ್ಲೆಗಳಲ್ಲಿ 84 ಗಂಟೆಗಳ ಲಾಕ್‌ಡೌನ್ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವು ಮಂಗಳವಾರ ಅತಿ ಹೆಚ್ಚು ಅಂದರೆ 3,164 ಕೊರೊನಾ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಪ್ರಕರಣ 1,66,054 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 25 ಸಾವುನೋವುಗಳು ಸಂಭವಿಸಿದ್ದು, ಒಟ್ಟಾರೆ ಈವರೆಗೆ 2,197 ಸೋಂಕಿತರು ಸಾವಿಗೀಡಾಗಿದ್ದಾರೆ.