ನವದೆಹಲಿ:ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ ದರದಲ್ಲಿ 10 ರೂ. ಇಳಿಸಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರ ಜಾರಿಯಾಗಲಿದೆ ಎಂದುಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನವೆಂಬರ್ 2020 ರಿಂದ ನಿರಂತರವಾಗಿ ಏರಿಕೆಯಾಗುತ್ತಿವೆ. ಭಾರತವು ಹೆಚ್ಚಾಗಿ ಕಚ್ಚಾ ತೈಲದ ಆಮದಿನ ಮೇಲೆ ಅವಲಂಬಿತವಾಗಿದೆ. ಬೆಲೆಗಳು ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ, ಅಂತಾರಾಷ್ಟ್ರೀಯ ಬೆಲೆಗಳ ಹೆಚ್ಚಳದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಬೆಲೆ ಹೆಚ್ಚಾಗಿವೆ ಎಂದು ಐಒಸಿಎಲ್ ತಿಳಿಸಿದೆ.