ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಟ್ರೈನ್​ನಿಂದ ಇಳಿಯಲು ಹೋಗಿ ಪ್ರಾಣ ಕಳೆದುಕೊಂಡ ಪುರಸಭೆ ಗುತ್ತಿಗೆದಾರ.. ಸಿಸಿ ಟಿವಿಯಲ್ಲಿ ಹೃದಯ ವಿದ್ರಾವಕ ಘಟನೆ! - ಥಾಣೆಯಲ್ಲಿ ರೈಲಿನಡಿ ಬಿದ್ದು ವ್ಯಕ್ತಿ ಸಾವು

ಈ ಅವಘಡದಿಂದಾಗಿ ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಮತ್ತು ಹತ್ತುವುದನ್ನು ಮಾಡದಂತೆ ಅನೇಕ ಬಾರಿ ರೈಲ್ವೆ ಪೊಲೀಸರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಆದ್ರೂ ಸಹ ಪ್ರಯಾಣಿಕರು ಈ ತಪ್ಪುಗಳನ್ನ ಮಾಡುತ್ತಿದ್ದು, ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ..

Contractor dies after falling train under in Mumbai, Maharashtra train news, Man died after stuck in rail in Thane, Thane railway station news, ಮುಂಬೈನಲ್ಲಿ ರೈಲು ಕೆಳಗೆ ಬಿದ್ದು ಗುತ್ತಿಗೆದಾರ ಸಾವು, ಮಹಾರಾಷ್ಟ್ರ ರೈಲು ಸುದ್ದಿ, ಥಾಣೆಯಲ್ಲಿ ರೈಲಿನಡಿ ಬಿದ್ದು ವ್ಯಕ್ತಿ ಸಾವು, ಥಾಣೆ ರೈಲು ನಿಲ್ದಾಣ ಸುದ್ದಿ,
ಸಿಸಿಟಿವಿ ದೃಶ್ಯ

By

Published : Apr 8, 2022, 8:23 AM IST

Updated : Apr 8, 2022, 9:08 AM IST

ಮುಂಬೈ :ಚಲಿಸುತ್ತಿದ್ದ ಟ್ರೈನ್​ನಿಂದ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪುರಸಭೆ ಗುತ್ತಿಗಾರ ರೈಲಿನಡಿ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಥಾಣೆ ಠಾಣಾ ವ್ಯಾಪ್ತಿಯ ಕಲ್ಯಾಣ್​ ರೈಲ್ವೆ ಸ್ಟೇಷನ್​ನಲ್ಲಿ ನಡೆದಿದೆ.

ಸಿಸಿಟಿವಿ ದೃಶ್ಯ

ಕಲ್ಯಾಣ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.5ರಲ್ಲಿ ಭೂಸಾವಲ್‌ನಿಂದ ಎಕ್ಸ್​ಪ್ರೆಸ್​ ಟ್ರೈನ್​ ಬಂದಿದೆ. ಟ್ರೈನ್​ ವೇಗವಾಗಿರುವಾಗಲೇ ಕಲ್ಯಾಣ್ ಡೊಂಬಿವಲಿ ಮಹಾನಗರ ಪಾಲಿಕೆಯ ಗುತ್ತಿಗೆದಾರ ಪ್ರದೀಪ್​ ಭಂಗಲೆ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ಚಲಿಸುತ್ತಿದ್ದ ಟ್ರೈನ್​ ಮಧ್ಯೆ ಸಿಲುಕಿದ್ದಾರೆ. ಬಚಾವ್​ ಮಾಡುವಷ್ಟರಲ್ಲೇ ಪ್ರದೀಪ್​ ಟ್ರೈನ್​ ಹಳಿಗೆ ಸಿಲುಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಓದಿ:ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್​ ಸಿಬ್ಬಂದಿ

ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ರುಕ್ಮಿಣಿಬಾಯಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಹೃದಯ ವಿದ್ರಾವಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡುಗರ ಹೃದಯ ತಲ್ಲಣಗೊಳಿಸುತ್ತದೆ. ಈ ಅವಘಡದಿಂದಾಗಿ ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಮತ್ತು ಹತ್ತುವುದನ್ನು ಮಾಡದಂತೆ ಅನೇಕ ಬಾರಿ ರೈಲ್ವೆ ಪೊಲೀಸರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಆದ್ರೂ ಸಹ ಪ್ರಯಾಣಿಕರು ಈ ತಪ್ಪುಗಳನ್ನ ಮಾಡುತ್ತಿದ್ದು, ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

Last Updated : Apr 8, 2022, 9:08 AM IST

ABOUT THE AUTHOR

...view details