ಕರ್ನಾಟಕ

karnataka

ETV Bharat / bharat

ಲೋಕಸಭೆ ಚುನಾವಣೆ: ಕರ್ನಾಟಕ, ತೆಲಂಗಾಣದಲ್ಲಿ 'ಬಲ' ಹೆಚ್ಚಿಸಿಕೊಳ್ಳಲು ಕಾಂಗ್ರೆಸ್​ ಕಾರ್ಯತಂತ್ರ - ಬಿಜೆಪಿ ಜೆಡಿಎಸ್ ಮೈತ್ರಿ

Congress Eyes On Karnataka and Telangana Lok Sabha Seats: 2024ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚುವರಿ 30 ಸ್ಥಾನಗಳನ್ನು ನೀಡಬಹುದಾದ ದಕ್ಷಿಣದ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದ ಮೇಲೆ ಕಾಂಗ್ರೆಸ್ ದೃಷ್ಟಿ ನೆಟ್ಟಿದೆ.

congress-chief-kharge-looking-at-lok-sabha-gains-in-karnataka-telangana
ಲೋಕಸಭೆ ಚುನಾವಣೆ: ಕರ್ನಾಟಕ, ತೆಲಂಗಾಣದಲ್ಲಿ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್​ ಕಾರ್ಯತಂತ್ರ

By ETV Bharat Karnataka Team

Published : Dec 19, 2023, 11:02 PM IST

ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಕಾರ್ಯತಂತ್ರ ರೂಪಿಸುತ್ತಿದೆ. ಇತ್ತೀಚೆಗೆ ಪಕ್ಷ ಅಧಿಕಾರಕ್ಕೆ ಬಂದಿರುವ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಕರ್ನಾಟಕದ ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ 20ಕ್ಕೂ ಅಧಿಕ ಮತ್ತು ತೆಲಂಗಾಣದ 17 ಕ್ಷೇತ್ರಗಳ ಪೈಕಿ 12ಕ್ಕೂ ಸ್ಥಾನಗಳಲ್ಲಿ ಗೆಲುವು ಗುರಿ ಹೊಂದಿದೆ.

ಲೋಕಸಭೆ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸುವ ಸಾಧ್ಯತೆಯಿದೆ. ಜೊತೆಗೆ ತೆಲಂಗಾಣದ 17 ಸಂಸದೀಯ ಸ್ಥಾನಗಳ ಉಸ್ತುವಾರಿಯನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಇತರ ಸಚಿವರಿಗೆ ಖರ್ಗೆ ವಹಿಸಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರಿಗೆ ಚೆವೆಲ್ಲಾ ಮತ್ತು ಮಹೆಬೂಬ್‌ನಗರ ಸ್ಥಾನಗಳ ಉಸ್ತುವಾರಿ ವಹಿಸಿದರೆ, ಡಿಸಿಎಂ ಭಟ್ಟಿ ವಿಕ್ರಮಮಾರ್ಕ್ ಅವರಿಗೆ ಹೈದರಾಬಾದ್ ಮತ್ತು ಸಿಕಂದರಾಬಾದ್‌ ಜವಾಬ್ದಾರಿ ವಹಿಸಲಾಗಿದೆ. ಈ ಹಿಂದೆಯೇ ಖರ್ಗೆ 17 ಲೋಕಸಭಾ ಸ್ಥಾನಗಳಿಗೆ ಎಐಸಿಸಿ ವೀಕ್ಷಕರಾಗಿ 17 ಹಿರಿಯ ನಾಯಕರನ್ನು ನಿಯೋಜಿಸಿದ್ದರು. ಪ್ರತಿ ಲೋಕಸಭಾ ಕ್ಷೇತ್ರದ ಪ್ಲಸ್ ಮತ್ತು ಮೈನಸ್‌ ಅಂಶಗಳ ತಮ್ಮ ವರದಿಗಳನ್ನು ವೀಕ್ಷಕರು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಂಸತ್ತಿನಿಂದ 141 ಸಂಸದರ ಅಮಾನತು: ದೇಶಾದ್ಯಂತ 'ಇಂಡಿಯಾ' ಮೈತ್ರಿಕೂಟದ ಪ್ರತಿಭಟನೆ

ಕಾಂಗ್ರೆಸ್‌ಗೆ ರಾಜ್ಯದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಉತ್ತಮ ಅವಕಾಶವಿದೆ. ನಮ್ಮ ಸರ್ಕಾರ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ನಮ್ಮ ಕಾರ್ಯಕರ್ತರು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್​ ರಾವ್ ಠಾಕ್ರೆ 'ಈಟಿವಿ ಭಾರತ್‌'ಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಘಟಕವೂ ಕಾರ್ಯಪ್ರವೃತ್ತವಾಗಿದ್ದು. ಮುಂದಿನ ಲೋಕಸಭಾ ಅಭ್ಯರ್ಥಿಗಳ ಸಂಭಾವ್ಯ ಅಭ್ಯರ್ಥಿಗಳ ಕುರಿತು ಈಗಾಗಲೇ ಜಿಲ್ಲಾ ತಂಡಗಳಿಂದ ಪ್ರತಿಕ್ರಿಯೆ ಪಡೆದುಕೊಂಡಿದೆ.

ಆದರೆ, ಇತ್ತೀಚಿನ ಬಿಜೆಪಿ-ಜೆಡಿಎಸ್ ಮೈತ್ರಿಯ ನಂತರ ರಾಜ್ಯದಲ್ಲಿ ರಾಜಕೀಯದಲ್ಲಿ ಹೊಸ ಚಲನವಲನ ಉಂಟಾಗಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯ ರಾಜಕೀಯದಲ್ಲಿ ಹೊಸ ಅಂಶವಾಗಿದೆ. ನೆಲ ಮಟ್ಟದಲ್ಲಿ ಅದರ ಪರಿಣಾಮ ನಾವು ನೋಡಬೇಕಾಗಿದೆ. ಆರಂಭದಲ್ಲಿ ಇದು ಮೈತ್ರಿಯಿಂದ ಜೆಡಿಎಸ್‌ನ ಮುಸ್ಲಿಂ ನಾಯಕರು ಪಕ್ಷ ತೊರೆಯಲು ಕಾರಣವಾಗಿದೆ. ಆದರೆ, ಇದು ಮತದಾರರ ಧ್ರುವೀಕರಣಕ್ಕೂ ಕಾರಣವಾಗಬಹುದು ಎಂದು ಎಐಸಿಸಿಯ ಹಿರಿಯ ನಾಯಕಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ತಂಡವು ಖರ್ಗೆ ಅವರೊಂದಿಗೆ ಲೋಕಸಭೆ ಕಾರ್ಯಕಂತ್ರ ಮತ್ತು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎದುರಿಸುವ ಮಾರ್ಗಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ನಾವು ಈ ಬಾರಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ರಾಜ್ಯದ ಹಿರಿಯ ನಾಯಕ ಪ್ರಕಾಶ್ ರಾಥೋಡ್ ಹೇಳಿದ್ದಾರೆ.

ಇದನ್ನೂ ಓದಿ:'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಪ್ರಸ್ತಾಪಿಸಿದ ಮಮತಾ, ಕೇಜ್ರಿವಾಲ್

ABOUT THE AUTHOR

...view details