ಕರ್ನಾಟಕ

karnataka

ETV Bharat / bharat

ಹೆದರಬೇಡಿ ನಾಗರಿಕರ ರಕ್ಷಣೆಗೆ ಸೇನೆ ಇದೆ; ಪ್ರಧಾನಿಗೆ ಅಭಯ ನೀಡಿದ ನರವಣೆ - kannada news

ಭಾರತೀಯ ಸೇನೆಯ ವೈದ್ಯಕೀಯ ಘಟಕಗಳು ಆಯಾ ಆಯಾ ರಾಜ್ಯ ಸರ್ಕಾರಗಳಿಗೆ ಲಭ್ಯವಿದ್ದು, ಅಗತ್ಯ ನೆರವು ನೀಡಿರುವ ಬಗ್ಗೆ ನರ್ವಣೆ ಅವರು ಪ್ರಧಾನಿ ಅವರ ಗಮನಕ್ಕೆ ತಂದರು. ಭಾರತೀಯ ಸೇನೆ ಎಲ್ಲ ನೆರವು ನೀಡುವ ಭರವಸೆಯನ್ನು ನೀಡಿದರು. ಅಷ್ಟೇ ಅಲ್ಲ ಭಾರತೀಯ ಸೇನೆ ಅಲ್ಲಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನ ನಿರ್ಮಿಸಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು

ಹೆದರಬೇಡಿ ನಾಗರಿಕರ ರಕ್ಷಣೆಗೆ ಸೇನೆ ಇದೆ; ಪ್ರಧಾನಿಗೆ ಅಭಯ ನೀಡಿದ ನರವಣೆ
ಹೆದರಬೇಡಿ ನಾಗರಿಕರ ರಕ್ಷಣೆಗೆ ಸೇನೆ ಇದೆ; ಪ್ರಧಾನಿಗೆ ಅಭಯ ನೀಡಿದ ನರವಣೆ

By

Published : Apr 29, 2021, 4:06 PM IST

ನವದೆಹಲಿ:ಪ್ರಧಾನಿ ಭೇಟಿ ಮಾಡಿದ ಭೂ ಸೇನಾ ಮುಖ್ಯಸ್ಥ ಎಂಎಂ ನರವಣೆ ಅವರು ಭಾರತೀಯ ಸೇನೆ ಕೋವಿಡ್​ ಸಾಂಕ್ರಮಿಕವನ್ನು ನಿರ್ಮೂಲನೆ ಮಾಡಲು ಭಾರತೀಯ ಭೂ ಸೇನೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರಣೆ ನೀಡಿದ್ದಾರೆ.

ಭಾರತೀಯ ಸೇನೆಯ ವೈದ್ಯಕೀಯ ಘಟಕಗಳು ಆಯಾ ಆಯಾ ರಾಜ್ಯ ಸರ್ಕಾರಗಳಿಗೆ ಲಭ್ಯವಿದ್ದು, ಅಗತ್ಯ ನೆರವು ನೀಡಿರುವ ಬಗ್ಗೆ ನರ್ವಣೆ ಅವರು ಪ್ರಧಾನಿ ಅವರ ಗಮನಕ್ಕೆ ತಂದರು. ಭಾರತೀಯ ಸೇನೆ ಎಲ್ಲ ನೆರವು ನೀಡುವ ಭರವಸೆಯನ್ನು ನೀಡಿದರು. ಅಷ್ಟೇ ಅಲ್ಲ ಭಾರತೀಯ ಸೇನೆ ಅಲ್ಲಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನ ನಿರ್ಮಿಸಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಸಿಕೊಂಡ ಮಾಜಿ ಪಿಎಂ: ಆಸ್ಪತ್ರೆಯಿಂದ ಡಿಸ್ಚಾರ್ಜ್​

ಇನ್ನು ಭಾರತೀಯ ಸೇನೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಆಸ್ಪತ್ರೆಗಳನ್ನ ಇನ್ನೂ ಕೂಡಾ ತೆರೆಯಲಿದೆ ಎಂದು ನರವಣೆ ಅವರು ಪ್ರಧಾನಿಗೆ ವಿವರಿಸಿದರು. ಅಷ್ಟೇ ಏಕೆ ನಾಗರಿಕರು ತಮ್ಮ ಹತ್ತಿರದ ಸೇನಾ ಆಸ್ಪತ್ರೆಗಳನ್ನು ಸಂಪರ್ಕಿಸಿ ಕೊರೊನಾಗೆ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ತಿಳಿಸಿದೆ.

ಆಮದು ಮಾಡಿದ ಆಕ್ಸಿಜನ್ ಟ್ಯಾಂಕರ್‌ಗಳು ಮತ್ತು ಅವುಗಳನ್ನು ನಿರ್ವಹಿಸಲು ವಿಶೇಷ ಕೌಶಲಗಳನ್ನ ಅಳವಡಿಸಿಕೊಂಡಿರು ಅಗತ್ಯ ವಾಹನಗಳನ್ನು ನೀಡುತ್ತಿದ್ದು, ಅವುಗಳಿಗೆ ಬೇಕಾದ ಮಾನವ ಶಕ್ತಿಯನ್ನು ಒದಗಿಸುತ್ತಿದೆ ಎಂಬ ವಿಚಾರವನ್ನ ಪ್ರಧಾನಿಗಳ ಗಮನಕ್ಕೆ ತಂದರು ಎಂದು ಪ್ರಧಾನಿಗಳ ಕಾರ್ಯಾಲಯ ಮಾಹಿತಿ ಹಂಚಿಕೊಂಡಿದೆ.

For All Latest Updates

TAGGED:

ABOUT THE AUTHOR

...view details