ಕರ್ನಾಟಕ

karnataka

ETV Bharat / bharat

ಆಗಸ್ಟ್ 15 ಅನ್ನು 'ವಿಭಜನೆಯ ಭಯಾನಕ ಖಂಡನೆ ದಿನ' ಎಂದು ಪಾಕ್​ ಘೋಷಿಸಿದರೆ..? - ಚಿದಂಬರಂ - ವಿಭಜನೆಯ ಭಯಾನಕ ಖಂಡನೆ ದಿ

ಆಗಸ್ಟ್ 14 ಅನ್ನು 'ವಿಭಜನೆಯ ಭಯಾನಕ ಸ್ಮರಣೆಯ ದಿನ'ವೆಂದು ಘೋಷಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಟ್ವೀಟ್​ ಮಾಡಿದ್ದಾರೆ.

Chidambaram
ಚಿದಂಬರಂ

By

Published : Aug 16, 2021, 5:33 PM IST

ನವದೆಹಲಿ: ಭಾರತವು ಪ್ರಬುದ್ಧ ಮತ್ತು ಅನುಭವಿ ರಾಷ್ಟ್ರವಾಗಿ ವರ್ತಿಸಬೇಕು ಎಂದು ಆಗಸ್ಟ್ 14 ಅನ್ನು 'ವಿಭಜನೆಯ ಭಯಾನಕ ಸ್ಮರಣೆಯ ದಿನ'ವೆಂದು ಘೋಷಿಸಿದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭಾ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಕಿಡಿಕಾರಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 14 ಅನ್ನು 'ವಿಭಜನೆಯ ಭಯಾನಕ ಸ್ಮರಣೆಯ ದಿನ'ವೆಂದು ಘೋಷಿಸಿದ್ದಾರೆ. ಆದರೆ, ವಿಭಜನೆಯ ಭೀಕರತೆ ಕೇವಲ ಒಂದು ದಿನದ್ದಾಗಿರಲಿಲ್ಲ" ಎಂದು ಚಿದಂಬರಂ ಟ್ವೀಟ್​ ಮಾಡಿದ್ದಾರೆ.

"ಪಾಕಿಸ್ತಾನವು ಆಗಸ್ಟ್ 15 ಅನ್ನು 'ವಿಭಜನೆಯ ಭಯಾನಕ ಖಂಡನೆ ದಿನ' ಎಂದು ಘೋಷಿಸಿದರೆ ಆಗ ಭಾರತ ಏನು ಮಾಡುತ್ತದೆ? ಹಗೆತನವನ್ನು ಹೊರತುಪಡಿಸಿ, ಭಾರತ ಮತ್ತು ಪಾಕಿಸ್ತಾನವು ನೆರೆ ರಾಷ್ಟ್ರಗಳಾಗಿವೆ. ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ, ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತವು ಪ್ರಬುದ್ಧ ಮತ್ತು ಅನುಭವಿ ರಾಷ್ಟ್ರವಾಗಿ ವರ್ತಿಸಬೇಕು" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ಆಗಸ್ಟ್ 14 ಇನ್ಮುಂದೆ 'ವಿಭಜನೆಯ ಭಯಾನಕತೆಯ ನೆನಪಿನ ದಿನ': ಪ್ರಧಾನಿ ಮೋದಿ

ಮಾಧ್ಯಮದೊಂದಿಗೆ ಮಾತನಾಡುವಾಗ ಚಿದಂಬರಂ ಟ್ವೀಟ್​ ಹಾಗೂ ಕಾಂಗ್ರೆಸ್​​ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಭಾರತದ ವಿಭಜನೆಯ ಹಿಂದಿರುವ ಜನರು ಎಂದಿಗೂ ವಿಭಜನೆಯ ಭೀಕರತೆಯ ನೋವು ಅನುಭವಿಸಲು ಸಾಧ್ಯವಿಲ್ಲ ಎಂದು ಟಾಂಗ್​ ನೀಡಿದ್ದಾರೆ.

ABOUT THE AUTHOR

...view details