ಕರ್ನಾಟಕ

karnataka

ETV Bharat / bharat

15 ವರ್ಷಗಳಿಂದ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆ ಪೊಲೀಸರಿಗೆ ಶರಣು

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ವೆಕೊ ಹಿಡಮೆನ್ ಎಂಬ ಮಹಿಳಾ ನಕ್ಸಲ್​ ಪೊಲೀಸರಿಗೆ ಶರಣಾಗಿದ್ದಾಳೆ. ಇದನ್ನು ದೊಡ್ಡ ಯಶಸ್ಸು ಎಂದು ಪೊಲೀಸರು ಕರೆದಿದ್ದಾರೆ.

chhattisgarh-sukma-news-woman-naxalite-carrying-rs-5-lakh-reward-surrenders
15 ವರ್ಷಗಳಿಂದ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆ ಪೊಲೀಸರಿಗೆ ಶರಣು

By

Published : Jul 30, 2023, 6:06 PM IST

ಸುಕ್ಮಾ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾಗಿದ್ದಾಳೆ. ಈಕೆ ಬಂಧನಕ್ಕಾಗಿ ಛತ್ತೀಸ್‌ಗಢ ಸರ್ಕಾರ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ವೆಕೊ ಹಿಡಮೆನ್ ಎಂಬ ಮಹಿಳಾ ನಕ್ಸಲ್ ಶನಿವಾರ​ ಪೊಲೀಸರಿಗೆ ಶರಣಾಗಿದ್ದು, ಈಕೆ ನಕ್ಸಲ್​ ಪೀಡಿತ ದಾಂತೇವಾಡ ಮತ್ತು ಸುಕ್ಮಾ ಗಡಿ ಪ್ರದೇಶಗಳಲ್ಲಿ 15 ವರ್ಷಗಳ ಕಾಲ ನಕ್ಸಲ್​ ಸಂಘಟನೆಯಲ್ಲಿ ಸಕ್ರಿಯಳಾಗಿದ್ದಳು. ಛತ್ತೀಸ್‌ಗಢ ಸರ್ಕಾರದ ಪುನರ್ವಸತಿ ನೀತಿಗೆ ಅನುಗುಣವಾಗಿ ಪೊಲೀಸರು ನಡೆಸುತ್ತಿರುವ ಪುನ ನಾರ್ಕೊಮ್ (ಗೊಂದಿ ಭಾಷೆಯಲ್ಲಿ 'ಹೊಸ ಉದಯ' ಎಂಬ ಅರ್ಥ) ಅಭಿಯಾನದ ಅಡಿಯಲ್ಲಿ ವೆಕೊ ಹಿಡಮೆನ್ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾಳೆ.

ಹತ್ಯೆಗೀಡಾದ ನಕ್ಸಲರ ಸ್ಮರಣಾರ್ಥ ಜುಲೈ 28ರಿಂದ ಆಗಸ್ಟ್ 3ರವರೆಗೆ ನಕ್ಸಲರು 'ಹುತಾತ್ಮ ವಾರ' ಎಂದು ಆಚರಿಸುತ್ತಿದ್ದಾರೆ. ಆದರೆ, ಇದರ ಎರಡನೇ ದಿನದಂದು ಈ ಮಹಿಳಾ ನಕ್ಸಲ್​ ಶರಣಾಗಿದ್ದಳು. ಆಕೆ ಸೆರೆಗೆ ಛತ್ತೀಸ್‌ಗಢ ಸರ್ಕಾರ ಐದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಅಲ್ಲದೇ. ಸುಕ್ಮಾ ಪೊಲೀಸರು ಸಹ 10 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು.

ಸುಕ್ಮಾ ಪೊಲೀಸರು 'ಹೊಸ ಉದಯ' ಅಭಿಯಾನದಡಿ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಜಾಗೃತಿ, ಪ್ರಚಾರ ನಡೆಸುತ್ತಿದ್ದಾರೆ ಎಂದು ಟೊಂಗ್‌ಪಾಲ್‌ನ ಉಪವಿಭಾಗದ ಪೊಲೀಸ್ ಅಧಿಕಾರಿ ತೊಮೇಶ್ ವರ್ಮಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಸಕ್ರಿಯ ನಕ್ಸಲೀಯರಿಗೆ ಶರಣಾಗುವಂತೆ ಕರೆ ನೀಡಲಾಗುತ್ತಿದೆ. ವಿವಿಧೆಡೆ ಬ್ಯಾನರ್‌ ಪೋಸ್ಟರ್‌ಗಳನ್ನೂ ಹಾಕಲಾಗುತ್ತಿದೆ. ಇದರಿಂದ ಪ್ರಭಾವಿತಗೊಂಡ ವೆಕೊ ಹಿಡಮೆನ್ ಶರಣಾಗಿದ್ದಾಳೆ ಎಂದು ಹೇಳಿದ್ದಾರೆ.

ಜನ ಆಯ್ಕೆಯ ಸರ್ಕಾರಕ್ಕೆ ಪರ್ಯಾಯವಾಗಿ ನಕ್ಸಲರೇ ಘೋಷಿಸಿಕೊಂಡಿದ್ದ ಜನತನಾ ಸರ್ಕಾರದಲ್ಲಿ ಪ್ರಮುಖರಲ್ಲಿ ಒಬ್ಬಳಾಗಿದ್ದು, ಈಕೆ ಕಟೆಕಲ್ಯಾನ್-ತೋಂಗ್ಪಾಲ್ ಪ್ರದೇಶದಲ್ಲಿ ನಕ್ಸಲ್ ಘಟನೆಗಳಲ್ಲಿ ಭಾಗಿಯಾಗಿದ್ದಾಳೆ. ಆಕೆ ಶರಣಾದ ಕೂಡಲೇ ಪೊಲೀಸರು ಆಕೆಗೆ ಪ್ರೋತ್ಸಾಹ ಧನ ವಿತರಿಸಿದ್ದಾರೆ. ಜೊತೆಗೆ ಪುನರ್ವಸತಿ ನೀತಿಯಡಿ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ವೆಕೊ ಹಿಡಮೆನ್‌ನ ಶರಣಾಗತಿಯನ್ನು ದೊಡ್ಡ ಯಶಸ್ಸು ಎಂದೇ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದೇ ವರ್ಷದ ಮಾರ್ಚ್‌ನಲ್ಲೂ ಸುಕ್ಮಾ ಜಿಲ್ಲೆಯಲ್ಲಿ ಸ್ಯಾಂಟೋ ಅಲಿಯಾಸ್ ರಾಮೆ ಎಂಬ ಮತ್ತೊಬ್ಬ ಮಹಿಳಾ ನಕ್ಸಲ್ ​ ಪೊಲೀಸರಿಗೆ ಶರಣಾಗಿದ್ದಳು. ವೆಕೊ ಹಿಡಮೆನ್​ನಂತೆ ರಾಮೆ ಬಂಧನಕ್ಕೂ ಕೂಡ 5 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಲಾಗಿತ್ತು.

ಇದನ್ನೂ ಓದಿ:ಅತಿ ಚಿಕ್ಕ ವಯಸ್ಸಿನಲ್ಲೇ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಬಾಲಕಿ: ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ

ABOUT THE AUTHOR

...view details