ಕರ್ನಾಟಕ

karnataka

ETV Bharat / bharat

ಬೆಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ.. ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿ ಬಂಧಿಸಿದ ಬೆಂಗಳೂರು ಪೊಲೀಸರು - Blrcitypolicee ಹೆಸರಿನಲ್ಲಿ ನಕಲಿ ಟ್ವಿಟ್ಟರ್​ ಖಾತೆ

ಬೆಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಆರಂಭಿಸಿ ಐಪಿಎಲ್ ರನ್ ಪೋಸ್ಟ್ ಮಾಡಿದ್ದ ಚೆನ್ನೈ ಮೆಡಿಕಲ್ ಕಾಲೇಜು ವಿದ್ಯಾರ್ಥಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Chennai Medical student creates fake twitter  fake twitter account in name of Bangalore  fake account in name of Bangalore city police  ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು  ಬೆಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ  ಖಾತೆ ಆರಂಭಿಸಿ ಐಪಿಎಲ್ ರನ್ ಪೋಸ್ಟ್  Blrcitypolicee ಹೆಸರಿನಲ್ಲಿ ನಕಲಿ ಟ್ವಿಟ್ಟರ್​ ಖಾತೆ  ಸಾಮಾಜಿಕ ಜಾಲತಾಣ ಬಳಸುವ ಕಂಪ್ಯೂಟರ್
ಬೆಂಗಳೂರು ಪೊಲೀಸರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ

By ETV Bharat Karnataka Team

Published : Aug 26, 2023, 11:49 AM IST

ಚೆನ್ನೈ, ತಮಿಳುನಾಡು:ಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ಟ್ವಿಟರ್ ಖಾತೆ ಆರಂಭಿಸಲಾಗಿದ್ದು, ಐಪಿಎಲ್ ಪಂದ್ಯಗಳು ಮತ್ತು ಪ್ರತಿ ಪಂದ್ಯದ ವೇಳೆ ಗಳಿಸಿದ ರನ್‌ಗಳ ಕುರಿತು ಪೋಸ್ಟ್ ಮಾಡಲಾಗಿತ್ತು. ಇದು ವೈರಲ್ ಆಗಿದ್ದು, ಈ ನಕಲಿ ಟ್ವಿಟರ್ ಖಾತೆ ಬಗ್ಗೆ ಬೆಂಗಳೂರು ಪೊಲೀಸರ ಗಮನಕ್ಕೆ ಬಂದಿದೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿರುವ ರವಿ ಎಂಬ ಕಾನ್ಸ್​ಟೇಬಲ್​ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಸಾಮಾಜಿಕ ಜಾಲತಾಣ ಬಳಸುವ ಕಂಪ್ಯೂಟರ್ ಮತ್ತು ನಕಲಿ ಟ್ವಿಟರ್ ಖಾತೆಯಿಂದ ಪೋಸ್ಟ್‌ಗಳನ್ನು ಪೋಸ್ಟ್ ಮಾಡುವ ಐಪಿ ವಿಳಾಸವನ್ನು ಗುರುತಿಸಲಾಗಿತ್ತು. ಈ ವೇಳೆ, ತಮಿಳುನಾಡಿನ ಚೆನ್ನೈನ ಸೇತುಪಟ್ಟು ಪ್ರದೇಶದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಂಬಾತ ಈ ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಸಿರುವುದು ಬಹಿರಂಗವಾಗಿದೆ.

ಅವರು Blrcitypolicee ಹೆಸರಿನಲ್ಲಿ ನಕಲಿ ಟ್ವಿಟ್ಟರ್​ ಖಾತೆಯನ್ನು ರಚಿಸಿದ್ದರು. IPL ರನ್​ಗಳನ್ನು ಪೋಸ್ಟ್ ಮಾಡಿದ್ದರು. ಇದು ನಿಜವಾದ ಬೆಂಗಳೂರು ಪೊಲೀಸ್ ಇಲಾಖೆಯ ಟ್ವಿಟ್ಟರ್ ಖಾತೆಯಂತೆ ಕಾಣುವ ಕಾರಣ ಅನೇಕ ಜನರು ಫಾಲೋ ಮಾಡಿದ್ದರು. ಬೆಂಗಳೂರು ಪೊಲೀಸ್ ಇಲಾಖೆಯ ಹೆಸರಿನಲ್ಲಿ ತಮಾಷೆಗಾಗಿ ಟ್ವಿಟರ್ ಖಾತೆ ಆರಂಭಿಸಿರುವುದಾಗಿ ಮಹೇಶ್ ಕುಮಾರ್ ಹೇಳಿದ್ದಾರೆ. ತಿರುವಣ್ಣಾಮಲೈ ಮೂಲದ ಮಹೇಶ್ ಕುಮಾರ್ ಚೆನ್ನೈ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ. ನಂತರ ಬೆಂಗಳೂರು ಪೊಲೀಸರು ಮಹೇಶ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಲೈಕ್ ಮತ್ತು ಶೇರ್​ಗಾಗಿ ಈ ಕೃತ್ಯ ಎಸಗಿದ್ದಾನೆ ಎಂದು ವೈದ್ಯಕೀಯ ವಿದ್ಯಾರ್ಥಿ ತನಿಖೆಯಲ್ಲಿ ಹೇಳಿದ್ದಾನೆ. ಅಲ್ಲದೇ, ಚೆನ್ನೈ ವಿದ್ಯಾರ್ಥಿ ತಾನು ಐಪಿಎಲ್ ತಂಡದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕಟ್ಟಾ ಅಭಿಮಾನಿ ಎಂದು ಹೇಳಿಕೆ ನೀಡಿದ್ದು, ತನ್ನ ತಂಡವನ್ನು ಸೋಲಿಸಿದ ಐಪಿಎಲ್ ತಂಡಗಳನ್ನು ಗೇಲಿ ಮಾಡಲು, ಮೇಮ್ಸ್ ಮಾಡಲು ಮತ್ತು ಪ್ರಸಿದ್ಧ ಕ್ರಿಕೆಟ್ ಆಟಗಾರರನ್ನು ಟ್ರೋಲ್ ಮಾಡಲು ಈ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸಿದ್ದಾನೆ ಎಂದು ತನಿಖೆ ಮೂಲಕ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮಹೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಅಗತ್ಯವಿದ್ದಾಗ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ಬೆಂಗಳೂರು ಪೊಲೀಸರು ಮಹೇಶ್​ ಕುಮಾರ್ ಅವರನ್ನು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಓದಿ:ಅತ್ಯಾಚಾರ ಆರೋಪಿ ಬಿಡುಗಡೆಗೆ ನಕಲಿ ಜಾಮೀನು ಆದೇಶ ನೀಡಿದ ಪೋಕ್ಸೋ ಕೋರ್ಟ್​ ಕ್ಲರ್ಕ್​!

ABOUT THE AUTHOR

...view details