ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರೀಂಕೋರ್ಟ್(Supreme Court) ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ಕೃಷಿ ತ್ಯಾಜ್ಯವನ್ನು ಸುಡುವುದರಿಂದಲೇ ವಾಯುಮಾಲಿನ್ಯ ಹೆಚ್ಚಳವಾಗಿದೆ ಎಂಬ ವಾದವನ್ನು ತಿರಸ್ಕರಿಸಿರುವ ಕೋರ್ಟ್, ಒಟ್ಟಾರೆ ಮಾಲಿನ್ಯದಲ್ಲಿ ಇದರ ಪ್ರಮಾಣ ಕೇವಲ ಶೇ.10 ರಷ್ಟು ಮಾತ್ರ ಇದೆ ಎಂದು ತಿಳಿಸಿದೆ.
ವಾಯುಮಾಲಿನ್ಯ(air pollution) ತಡೆಗಾಗಿ ಯಾವ ಕೈಗಾರಿಕೆಗಳನ್ನು ಸ್ಥಗಿತಗೊಳಿಸಬಹುದು, ಯಾವ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯಬಹುದು, ಹೆಚ್ಚು ಹಾನಿಕಾರಕವಾದ ವಿದ್ಯುತ್ ಸ್ಥಾವರಗಳನ್ನು ನಿಲ್ಲಿಸಬಹುದೇ?, ಈ ವೇಳೆ ಪರ್ಯಾಯ ವಿದ್ಯುತ್ ಒದಗಿಸುವ ಬಗ್ಗೆ ನಾಳೆ(ಮಂಗಳವಾರ) ಸಂಜೆಯೊಳಗೆ ವರದಿ ನೀಡುವಂತೆ ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಇದನ್ನೂ ಓದಿ: ಷೇರು ಮಾರುಕಟ್ಟೆ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 300 ಅಂಕಗಳ ಏರಿಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ಕುರಿತಾಗಿ ತುರ್ತು ಸಭೆಯನ್ನು ಕರೆಯದೇ, ನಾವು ಈ ಬಗ್ಗೆ ಅಜೆಂಡಾ ರೂಪಿಸಲು ತಿಳಿ ಹೇಳಿರುವುದಕ್ಕೆ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ನಾಳೆಯೊಳಗೆ ವರದಿ ನೀಡಲು ಸೂಚಿಸಿದೆ.