ಗುವಾಹಟಿ (ಅಸ್ಸೋಂ):ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿದ್ದ ವಿಶೇಷ ವಿಮಾನವು ಅಸ್ಸೋಂದ ಗುವಾಹಟಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂದು ತ್ರಿಪುರಾದ ಅಗರ್ತಲಾಗೆ ಭೇಟಿ ಅವರು ನೀಡ ನೀಡಬೇಕಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಅಮಿತ್ ಶಾ ಅವರ ವಿಮಾನ ಅಗರ್ತಲಾದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿಯೇ ಗೃಹ ಸಚಿವರ ವಿಮಾನವು ಹಠಾತ್ತನೆ ಗುವಾಹಟಿಗೆ ಆಗಮಿಸಿತು ಎಂದು ತಿಳಿದು ಬಂದಿದೆ.
ಗೃಹ ಸಚಿವ ಅಮಿತ್ ಶಾ ಅವರಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ - ಗೃಹ ಸಚಿವ ಅಮಿತ್ ಶಾ
ಅಸ್ಸೋಂದ ಗುವಾಹಟಿಯಲ್ಲಿ ಅಮಿತ್ ಶಾ ಅವರಿದ್ದ ವಿಶೇಷ ವಿಮಾನ ತುರ್ತು ಭೂಸ್ಪರ್ಶ - ತ್ರಿಪುರಾದ ಅಗರ್ತಲಾಗೆ ಭೇಟಿ ನೀಡಬೇಕಿದ್ದ ಗೃಹ ಸಚಿವ - ಪ್ರತಿಕೂಲ ಹವಾಮಾನದಿಂದಾಗಿ ಗುವಾಹಟಿಯಲ್ಲಿ ವಿಮಾನ ಲ್ಯಾಡಿಂಗ್
Etv Bharat
ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಹೋಟೆಲ್ ರಾಡಿಸನ್ ಬ್ಲೂನಲ್ಲಿ ಅವರು ಬುಧವಾರ ರಾತ್ರಿ ಕಳೆಯಲಿದ್ದಾರೆ. ಗುರುವಾರ ಬೆಳಗ್ಗೆ ಗುವಾಹಟಿಯಿಂದ ಅಗರ್ತಲಾಗೆ ತೆರಳಲಿದ್ದಾರೆ.
ಇದನ್ನೂ ಓದಿ:ಪಶ್ಚಿಮಬಂಗಾಳದಲ್ಲಿ ವಂದೇ ಭಾರತ್ ಸುಗಮ ಸಂಚಾರಕ್ಕೆ ಭದ್ರತೆ ಹೆಚ್ಚಳ.. ಮೇಲ್ವಿಚಾರಣೆಗೆ ವಾಟ್ಸಾಪ್ ಗ್ರೂಪ್ ರಚನೆ