ಕರ್ನಾಟಕ

karnataka

ETV Bharat / bharat

ಕೋವಿಡ್​ ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಸೇನೆ ಸನ್ನದ್ಧ: ಸಿಡಿಎಸ್​ ರಾವತ್​ - CDS General Bipin Rawat talk about corona issues

ಮಹಾಮಾರಿ ಕೊರೊನಾ ಹೊಡೆದೋಡಿಸಲು ಸೇನೆ ತನ್ನದೇ ರೀತಿಯಲ್ಲಿ ಸಹಾಯ ಮಾಡಲಿದ್ದು, ನಾಗರಿಕ ಸೌಲಭ್ಯಗಳನ್ನು ಸಮಯಕ್ಕೆ ಅನುಗುಣವಾಗಿ ತಲುಪಿಸುವಲ್ಲಿ ಕಾರ್ಯಪ್ರವೃತ್ತವಾಗಲಿದೆ ಎಂದು ಸಿಡಿಎಸ್​ ಜನರಲ್​ ಬಿಪಿನ್ ರಾವತ್ ಅಭಯ ನೀಡಿದ್ದಾರೆ.

cds-general-bipin-rawat
ಸಿಡಿಎಸ್​ ರಾವತ್​

By

Published : Apr 27, 2021, 4:37 PM IST

ನವದೆಹಲಿ: ಎಲ್ಲ ಅಡ್ಡಿ ಆತಂಕಗಳನ್ನ ಹೊಡೆದೋಡಿಸಲು ನಮ್ಮ ಪುರುಷ ಹಾಗೂ ಮಹಿಳಾ ಸೈನಿಕರಿಗ ಸಮವಸ್ತ್ರ ಅತ್ಯಂತ ದೊಡ್ಡ ಕೊಡುಗೆ ನೀಡುತ್ತಿದ್ದು, ಸೇನೆ ಹೆಚ್ಚುವರಿ ಮೈಲಿಗಲ್ಲನ್ನು ತಂದುಕೊಟ್ಟಿದೆ ಎಂದು ರಕ್ಷಣಾ ಇಲಾಖೆಗಳ ಮುಖ್ಯಸ್ಥ (ಸಿಡಿಎಸ್​) ಜನರಲ್​ ಬಿಪಿನ್ ರಾವತ್​ ತಿಳಿಸಿದ್ದಾರೆ.

ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂಬುದನ್ನು ಸಾಧಿಸಿಯೇ ತೀರುತ್ತೇವೆ ಎಂಬ ಘೋಷಣೆಯೊಂದಿಗೆ ಮುನ್ನುಗ್ಗುತ್ತಿದ್ದೇವೆ. ಆದರೂ ನಾವು ತಲುಪುವ ಗುರಿ ಬಹಳ ದೂರವಿದೆ ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟರು.

ಮಹಾಮಾರಿ ಕೊರೊನಾ ಹೊಡೆದೋಡಿಸಲು ಸೇನೆ ತನ್ನದೇ ರೀತಿಯಲ್ಲಿ ಸಹಾಯ ಮಾಡಲಿದ್ದು, ಸರ್ಕಾರದ ಜೊತೆ ಕೈ ಜೋಡಿಸುತ್ತೇವೆ. ನಾಗರಿಕ ಸೌಲಭ್ಯಗಳನ್ನು ಸಮಯಕ್ಕೆ ಅನುಗುಣವಾಗಿ ತಲುಪಿಸುವಲ್ಲಿ ಸೇನೆ ಕಾರ್ಯಪ್ರವೃತ್ತವಾಗಲಿದೆ ಎಂದು ಸಿಡಿಎಸ್​ ಜನರಲ್​ ಬಿಪಿನ್ ರಾವತ್ ಅಭಯ ನೀಡಿದ್ದಾರೆ.

ಓದಿ:ಕಾಶಿ ವಿಶ್ವನಾಥನ ಸನ್ನಿಧಿಯಿಂದ ಕೊರೊನಾ ರೋಗಿಗಳಿಗೆ ಕಿಟ್

ABOUT THE AUTHOR

...view details