ಜೈಪುರ: ಏಳನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿ ಹೊಟ್ಟೆನೋವು ಎಂದು ಆಕೆಯ ತಾಯಿಗೆ ಹೇಳಿದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದಾರೆ. ಇದರಿಂದ ಬೆಚ್ಚಿದ ಪೋಷಕರು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯು ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದ ಎಂದು ಹೇಳಲಾಗುತ್ತಿದೆ. ಬಾಲಕಿಯ ಎಲ್ಲಾ ವೈದ್ಯಕೀಯ ಪರೀಕ್ಷೆಯ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿವರ :ಠಾಣಾಧಿಕಾರಿ ರವೀಂದ್ರ ಪ್ರತಾಪ್ ಸಿಂಗ್ ಮಾತನಾಡಿ,13 ವರ್ಷದ ಬಾಲಕಿಯ ಈ ಕುಟುಂಬ ಮೂಲತಃ ಪಶ್ಚಿಮ ಬಂಗಾಳದ್ದಾಗಿದೆ. ಸಂತ್ರಸ್ತೆ ತನ್ನ ಕುಟುಂಬದೊಂದಿಗೆ ಜೈಪುರದಲ್ಲಿ ಬಹಳ ದಿನಗಳಿಂದ ವಾಸವಾಗಿದ್ದಾಳೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿ ಕೆಲವು ಯುವಕರೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಯುವಕನೊಬ್ಬ ಆಕೆಯನ್ನು ಭೇಟಿಯಾಗಲು ಕರೆದು ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮುಂದಿನ ಚುನಾವಣೆಯೊಳಗೆ 'ಬಾಂಬೆ ಫೈಲ್ಸ್' ಪುಸ್ತಕ ಬಿಡುಗಡೆ: ಹೆಚ್. ವಿಶ್ವನಾಥ್