ಮುಂಬೈ, ಮಹಾರಾಷ್ಟ್ರ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿರುದ್ಧದ ಪ್ರಕರಣದಲ್ಲಿ ಬುಧವಾರ ಬೆಳಗ್ಗೆ ಸಾಕ್ಷಿಯೊಬ್ಬರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಈ ಸಾಕ್ಷಿ ನೀಡಿದ ಹೇಳಿಕೆಯನ್ನೂ ಈ ಪ್ರಕರಣದಲ್ಲಿ ಪರಿಗಣಿಸಬೇಕು ಎಂದು ಸರ್ಕಾರದ ವಕೀಲರ ವಾದವಾಗಿತ್ತು. ಈ ಸಂಬಂಧ ಸರ್ಕಾರಿ ವಕೀಲರ ಮನವಿಗೆ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಒಟ್ಟು 10 ಸಾಕ್ಷಿಗಳ ಸಾಕ್ಷ್ಯವನ್ನು ಸರ್ಕಾರಿ ಪಕ್ಷವು ಹಾಜರಪಡಿಸಲಿದ್ದು, 20 ವರ್ಷಗಳ ನಂತರ ಈ ಪ್ರಕರಣ ಮತ್ತೆ ಓಪನ್ ಆಗಿದೆ.
ಇಬ್ರಾಹಿಂ ಪಾರ್ಕರ್ ಹತ್ಯೆ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಅವರ ಪತಿ ಇಬ್ರಾಹಿಂ ಪಾರ್ಕರ್ ಅವರನ್ನು ಡಾನ್ ಅರುಣ್ ಗಾವ್ಲಿಯ ಸಹಚರರು ಕೊಂದಿದ್ದರು. ಇದರ ಪ್ರತಿಕಾರವಾಗಿ ದಾವೂದ್ ಇಬ್ರಾಹಿಂನ ಹಿಂಬಾಲಕರು ಜೆಜೆ ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆಸಿ ಡಾನ್ ಅರುಣ್ ಗಾವ್ಲಿಯ ಸಹಚರರನ್ನು ಕೊಂದು ಹಾಕಿದ್ದರು ಎನ್ನಲಾಗಿದೆ. ಈ ಘಟನೆ ಮುಂಬೈ ಮತ್ತು ಮಹಾರಾಷ್ಟ್ರ ಸೇರಿದಂತೆ ಇಡೀ ದೇಶವು ಬೆಚ್ಚಿಬಿದ್ದಿತ್ತು.
ಸಾಕ್ಷಿಗಳನ್ನು ಹಾಜರುಪಡಿಸಲು ಅವಕಾಶ: 1992ರಲ್ಲಿ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ನಿಂದ ಅರುಣ್ ಗಾವ್ಲಿ ಸಹಚರನನ್ನು ಹತ್ಯೆ ಮಾಡಲಾಗಿತ್ತು. ಆರೋಪಿ ಯಾಸಿನ್ ಮನ್ಸೂರ್ ಮೊಹಮ್ಮದ್ ಫಾರೂಕ್ ಅಲಿಯಾಸ್ ಫಾರೂಕ್ ಟಕ್ಲಾ ವಿರುದ್ಧದ ಪ್ರಕರಣದ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಅವರ ವಿರುದ್ಧ ಆರೋಪ ದೃಢಪಟ್ಟಿದ್ದು, ಅಕ್ಟೋಬರ್ 19 ರಿಂದ ಸಾಕ್ಷಿಗಳನ್ನು ಹಾಜರುಪಡಿಸಲು ನ್ಯಾಯಾಲಯವು ಸರ್ಕಾರಿ ಪಕ್ಷಕ್ಕೆ ಅನುಮತಿ ನೀಡಿದೆ.