ಕರ್ನಾಟಕ

karnataka

ETV Bharat / bharat

ಮೋರ್ಬಿಯಲ್ಲಿ 600 ಕೋಟಿ ಮೌಲ್ಯದ ಡ್ರಗ್ಸ್ ವಶ : ನಾಲ್ವರ ಬಂಧನ - ನಾಲ್ವರ ಬಂಧನ

ಕಾರ್ಯಾಚರಣೆಯಲ್ಲಿ ಜಿಂಜುಡಾ ಗ್ರಾಮದ ಹಲವು ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.ರಾಜ್ಯ ಗೃಹ ಸಚಿವ ಹರ್ಷ ಸಾಂಘ್ವಿ ಟ್ವೀಟ್ ಮಾಡುವ ಮೂಲಕ ಗುಜರಾತ್ ಎಟಿಎಸ್ ಅನ್ನು ಅಭಿನಂದಿಸಿದ್ದಾರೆ.

http://10.10.50.90//IANS_ENGLISH/10-November-2021/7e73041e1e9de66cf816d9fdd8c1fc0d_1011a_1636515247_164.jpg
ಮೋರ್ಬಿಯಲ್ಲಿ 600 ಕೋಟಿ ಮೌಲ್ಯದ ಡ್ರಗ್ಸ್ ವಶ : ನಾಲ್ವರ ಬಂಧನ

By

Published : Nov 15, 2021, 8:56 AM IST

Updated : Nov 15, 2021, 10:05 AM IST

ದ್ವಾರಕಾ(ಗುಜರಾತ್​): ರಾಜ್ಯದಲ್ಲಿ ಡ್ರಗ್ಸ್ ಬಗ್ಗೆ ಮತ್ತೊಮ್ಮೆ ಭಾರೀ ಸುದ್ದಿ ಕೇಳಿಬಂದಿದೆ. ಗುಜರಾತ್ ಎಟಿಎಸ್ ಮೋರ್ಬಿಯ ಜಿಂಜುಡಾ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 600 ಕೋಟಿ ಮೌಲ್ಯದ 120 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ 4 ಮಂದಿಯನ್ನು ಬಂಧಿಸಲಾಗಿದೆ.

ಎಟಿಎಸ್ ಮತ್ತು ಮೊರ್ಬಿ ಪೊಲೀಸರು ನಿನ್ನೆ ತಡರಾತ್ರಿ ಜಿಂಜುಡಾ ಗ್ರಾಮದ ಮೇಲೆ ದಾಳಿ ನಡೆಸಿ ನಾಲ್ವರು ಸೇರಿ 600 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮೊರ್ಬಿಯಿಂದ 35 ಕಿಮೀ ದೂರದಲ್ಲಿರುವ ಕಡಲತೀರದ ಗ್ರಾಮವಾದ ಜಿಂಜುಡಾದಲ್ಲಿ ಈ ಕಾರ್ಯಾಚರಣೆ ಜರುಗಿದೆ.

ಕಾರ್ಯಾಚರಣೆಯಲ್ಲಿ ಜಿಂಜುಡಾ ಗ್ರಾಮದ ಹಲವು ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.ರಾಜ್ಯ ಗೃಹ ಸಚಿವ ಹರ್ಷ ಸಾಂಘ್ವಿ ಟ್ವೀಟ್ ಮಾಡುವ ಮೂಲಕ ಗುಜರಾತ್ ಎಟಿಎಸ್ ಅನ್ನು ಅಭಿನಂದಿಸಿದ್ದಾರೆ. ಇದೇ ವೇಳೆ, ಬೆಳಗ್ಗೆ 11 ಗಂಟೆಗೆ ಪೊಲೀಸ್ ಇಲಾಖೆಯಿಂದ ಡ್ರಗ್ಸ್ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಯಲಿದೆ.

ಒಂದು ವಾರದಲ್ಲಿ ಎರಡನೇ ಬಾರಿಗೆ ರಾಜ್ಯದಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಐದು ದಿನಗಳ ಹಿಂದೆ ದೇವಭೂಮಿ ದ್ವಾರಕಾದ ಖಂಭಾಲಿಯಾ ಆರಾಧನಾ ಧಾಮ್ ಬಳಿ ಕಾರಿನಲ್ಲಿ ಅಂದಾಜು 66 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇವರ ಬೆಲೆ 350 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಎಲ್ಲ 403 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ: ಪ್ರಿಯಾಂಕಾ ಗಾಂಧಿ

Last Updated : Nov 15, 2021, 10:05 AM IST

ABOUT THE AUTHOR

...view details