ಕರ್ನಾಟಕ

karnataka

ETV Bharat / bharat

ವಸತಿ ಕಟ್ಟಡ ವಿವಾದ: ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸೋನು ಸೂದ್ - ನಟ ಸೋನು ಸೂದ್

ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನಟ ಸೋನು ಸೂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

ಸೋನು ಸೂದ್
ಸೋನು ಸೂದ್

By

Published : Feb 5, 2021, 2:44 PM IST

ನವದೆಹಲಿ: ವಸತಿ ಕಟ್ಟಡ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬಾಲಿವುಡ್ ನಟ ಸೋನು ಸೂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್‌ನ ಮೂರು ನ್ಯಾಯಾಧೀಶರ ಪೀಠವು ಅರ್ಜಿ ಹಿಂಪಡೆಯಲು ಅವಕಾಶ ನೀಡಿದೆ.

ಅನುಮತಿಯಿಲ್ಲದೇ ಬಹುಮಹಡಿ ಕಟ್ಟಡವನ್ನು ಹೋಟೆಲ್​​ ಆಗಿ ಪರಿವರ್ತಿಸಿದ ಆರೋಪದಡಿ ನಟ ಸೋನು ಸೂದ್​ ವಿರುದ್ಧ ಬೃಹತ್​​ ಮುಂಬೈ ಮಹಾನಗರ ಪಾಲಿಕೆ ದಾಖಲಿಸಿದ್ದ ದೂರನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್​ ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ನಟ ಸೋನು ಸೂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ABOUT THE AUTHOR

...view details