ಚೆನ್ನೈ: ಮದ್ರಾಸ್ ಐಐಟಿ (Indian institute of technology) ಕ್ಯಾಂಪಸ್‌ನಲ್ಲಿ ತಾತ್ಕಾಲಿಕ ಯೋಜನಾ ಸಿಬ್ಬಂದಿಯ ಮೃತದೇಹವು ಸುಟ್ಟರೀತಿಯಲ್ಲಿ ಪತ್ತೆಯಾಗಿದೆ ಎಂದು ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
IIT ಮದ್ರಾಸ್ ಕ್ಯಾಂಪಸ್‌ನಲ್ಲಿ ಭೀಕರ ಘಟನೆ.. ಸುಟ್ಟ ಸ್ಥಿತಿಯಲ್ಲಿ ಸಿಬ್ಬಂದಿ ಶವ ಪತ್ತೆ! - ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಮೃತದೇಹ ಪತ್ತೆ
ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ, ಇನ್ಸ್ಟ್ಯೂಟ್ನ ತಾತ್ಕಾಲಿಕ ಯೋಜನಾ ಸಿಬ್ಬಂದಿಯೊಬ್ಬರ ಮೃತದೇಹವು ಸುಟ್ಟರೀತಿಯಲ್ಲಿ ಪತ್ತೆಯಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
IIT
ಮೃತ ವ್ಯಕ್ತಿಯು ಏಪ್ರಿಲ್ 2021 ರಲ್ಲಿ ಇನ್ಸ್ಟಿಟ್ಯೂಟ್ಗೆ ಸೇರಿದ್ದರು. ಹಾಗೂ ಕ್ಯಾಂಪಸ್ನ ಹೊರಗೆ ವಾಸವಿದ್ದರು ಎಂದು ಹೇಳಲಾಗ್ತಿದೆ.
ನಾವು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ ಮತ್ತು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಅಗಲಿದ ಸಿಬ್ಬಂದಿಯ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪವನ್ನು ಸೂಚಿಸುವುದಾಗಿ ತಿಳಿಸಲಾಗಿದೆ.