ಕರ್ನಾಟಕ

karnataka

By

Published : Sep 8, 2021, 7:30 PM IST

Updated : Sep 8, 2021, 8:40 PM IST

ETV Bharat / bharat

ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿಯಾಗಿ ಭೀಕರ ದುರಂತ: 50ಕ್ಕೂ ಹೆಚ್ಚು ಮಂದಿ ನಾಪತ್ತೆ

ಅಸ್ಸೋಂನ ಜೋರ್ಹತ್ ಜಿಲ್ಲೆಯ ನಿಮತಿ ಘಾಟ್ ಬಳಿ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್​ಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ಬೋಟ್‌ಗಳಲ್ಲಿ ಸುಮಾರು 120 ಮಂದಿ ಪ್ರಯಾಣಿಸುತ್ತಿದ್ದರು. ಈಗಾಗಲೇ 40 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ 50ಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸದ್ಯ ಓರ್ವ ವ್ಯಕ್ತಿಯ ಮೃತದೇಹ ದೊರೆತಿರುವುದಾಗಿ ತಿಳಿದುಬಂದಿದೆ.

ಅಸ್ಸೋಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್​ಗಳ ಮಧ್ಯೆ ಡಿಕ್ಕಿ
ಅಸ್ಸೋಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್​ಗಳ ಮಧ್ಯೆ ಡಿಕ್ಕಿ

ಗುವಾಹಟಿ/ಮಿರ್ಜಾಪುರ: ಅಸ್ಸೋಂನ ಜೋರ್ಹತ್ ಜಿಲ್ಲೆಯ ನಿಮತಿ ಘಾಟ್ ಬಳಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟ್​ಗಳ ಮಧ್ಯೆ ಭೀಕರ ಡಿಕ್ಕಿ ಸಂಭವಿಸಿದೆ.

ಖಾಸಗಿ ಬೋಟ್‌ವೊಂದು ಇಲ್ಲಿನ ನಿಮತಿ ಘಾಟ್​ನಿಂದ ಮಜುಲಿ ಎಂಬಲ್ಲಿಗೆ ಹೋಗುವಾಗ ಮತ್ತು ಸರ್ಕಾರಿ ಸ್ವಾಮ್ಯದ ದೋಣಿ ಮಜುಲಿಯಿಂದ ಬರುತ್ತಿದ್ದಾಗ ಈ ಅವಘಢ ಸಂಭವಿಸಿದೆ. ಈ ವೇಳೆ 120 ಪ್ರಯಾಣಿಕರು ಎರಡು ದೋಣಿಗಳಲ್ಲಿದ್ದರು ಎಂದು ತಿಳಿದುಬಂದಿದೆ.

ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿಯಾಗಿ ಭೀಕರ ದುರಂತ

ಈಗಾಗಲೇ 40 ಜನರ ರಕ್ಷಣೆ:

'ನತದೃಷ್ಟ ದೋಣಿಗಳಲ್ಲಿದ್ದ 40 ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ' ಎಂದು ಜೋರ್ಹತ್ ಹೆಚ್ಚುವರಿ ಡಿಸಿ ದಾಮೋದರ್ ಬಾರ್ಮನ್ ಹೇಳಿದ್ದಾರೆ.

ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕಳವಳ:

ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಬಗ್ಗೆ ಟ್ವೀಟ್​ ಮಾಡಿದ್ದು, 'ನಿಮತಿ ಘಾಟ್, ಜೋರ್ಹತ್​ ಬಳಿ ಸಂಭವಿಸಿದ ದೋಣಿ ದುರಂತ ನೋವು ತಂದಿದೆ. NDRF & SDRF ನೆರವಿನೊಂದಿಗೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಮಜುಲಿ ಮತ್ತು ಜೋರ್ಹತ್ ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ನಾನು ನಾಳೆ ನಿಮತಿ ಘಾಟ್‌ಗೆ ಭೇಟಿ ನೀಡುತ್ತೇನೆ' ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬೇಸರ

'ಅಸ್ಸೋಂನಲ್ಲಿ ನಡೆದ ದೋಣಿ ದುರಂತದಿಂದ ದುಃಖವಾಗಿದೆ. ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಾನು ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಒಂದು ಮೃತದೇಹ ಪತ್ತೆ:

'ದೋಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಆತನ ಮೃತದೇಹ ದೊರೆತಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಜೋರ್ಹತ್ ಎಸ್ಪಿ ಅಂಕುರ್ ಜೈನ್ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯಲ್ಲಿ ರಾತ್ರಿಯೂ ಮುಂದುವರೆದ ಶೋಧ ಕಾರ್ಯ

ಘಟನೆ- 2

ಗಂಗಾನದಿಯಲ್ಲಿ ಮಗುಚಿ ಬಿದ್ದ ದೋಣಿ:

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ವಿಂಧ್ಯಾಚಲದ ಅಖಾಡ ಘಾಟ್​ನಲ್ಲಿ ಗಂಗಾ ನದಿಯಲ್ಲಿ ಪ್ರಯಾಣಿಕರಿದ್ದ ದೋಣಿ ಮಗುಚಿ ಬಿದ್ದಿದೆ. ದೋಣಿಯಲ್ಲಿ ಒಂದೇ ಕುಟುಂಬದ 12 ಜನರು ಇದ್ದರು. ಇವರು ರಾಂಚಿಯಿಂದ ವಿಂಧ್ಯಾಚಲಕ್ಕೆ ಹೊರಟಿದ್ದರು. ನದಿಯಲ್ಲಿ ಮುಳುಗಿದ 6 ಜನರನ್ನು ರಕ್ಷಿಸಲಾಗಿದೆ. ಕಾಣೆಯಾದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳಿಗಾಗಿ ಶೋಧ ನಡೆಯುತ್ತಿದೆ.

ಮಿರ್ಜಾಪುರದ ಗಂಗಾನದಿಯಲ್ಲಿ ಮಗುಚಿ ಬಿದ್ದ ದೋಣಿ

ಇದನ್ನೂಓದಿ:ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕುಡಿಯೋ ನೀರಿಗಾಗಿ ಜನ ಕೋರ್ಟ್‌ ಬಾಗಿಲು ತಟ್ಟುತ್ತಿರುವುದು ದುರಾದೃಷ್ಟಕರ: ಬಾಂಬೆ ಹೈಕೋರ್ಟ್‌

Last Updated : Sep 8, 2021, 8:40 PM IST

For All Latest Updates

ABOUT THE AUTHOR

...view details