ಕರ್ನಾಟಕ

karnataka

ETV Bharat / bharat

ಮಧ್ಯರಾತ್ರಿಯಲ್ಲಿ ಜನರ ಮೇಲೆ ಗುಂಡಿನ ದಾಳಿ.. ಓರ್ವ ಸಾವು, ಮೂವರಿಗೆ ಗಾಯ - ಹಳೆ ದ್ವೇಷವೇ ಘಟನೆಗೆ ಕಾರಣ

ಮಹಾರಾಷ್ಟ್ರದ ಮುಂಬೈನಲ್ಲಿ ರಾತ್ರೋರಾತ್ರಿ ಗುಂಡಿನ ಸದ್ದು ಮೊಳಗಿದೆ. ನಿಂತ ಜನರ ಮೇಲೆ ಆರೋಪಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ.

bike person opened fire on people in mumbai  bike person opened fire in Maharashtra  bike person opened fire on people  many person injured in shooting incident  ಜನರ ಮೇಲೆ ಗುಂಡಿನ ದಾಳಿ  ರಾತ್ರೋರಾತ್ರಿ ಗುಂಡಿನ ಸದ್ದು  ಗುಂಡು ಹಾರಿಸಿದ ಘಟನೆ ಮುನ್ನೆಲೆಗೆ  ಏಕಾಏಕಿ ನಾಲ್ವರ ಮೇಲೆ ಗುಂಡಿನ ದಾಳಿ  ಮಾಜಿ ಕಾರ್ಪೊರೇಟರ್ ಕಮಲೇಶ್ ಯಾದವ್  ಹಳೆ ದ್ವೇಷವೇ ಘಟನೆಗೆ ಕಾರಣ  ಮುಂಬೈ ಪೊಲೀಸ್‌ ಡಿಸಿಪಿ ವಿಶಾಲ್ ಠಾಕೂರ್
ಮಧ್ಯರಾತ್ರಿಯಲ್ಲಿ ಜನರ ಮೇಲೆ ಗುಂಡಿನ ದಾಳಿ

By

Published : Oct 1, 2022, 7:58 AM IST

ಮುಂಬೈ(ಮಹಾರಾಷ್ಟ್ರ):ಇಲ್ಲಿನ ಕಂಡಿವಲಿಯಲ್ಲಿ ಗುಂಡಿನ ದಾಳಿಯ ಘಟನೆ ಮುನ್ನೆಲೆಗೆ ಬಂದಿದೆ. ಬೈಕ್‌ನಲ್ಲಿ ಬಂದ ಇಬ್ಬರು ನಾಲ್ಕು ಸುತ್ತು ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ದುರ್ಘಟನೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ.

ಮಾಹಿತಿ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಮುಂಬೈನ ಕಂಡಿವಲಿಯಲ್ಲಿ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಏಕಾಏಕಿ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಶತಾಬ್ದಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದ ಆರೋಪಿಗಳು ಮತ್ತು ಘಟನೆಯಲ್ಲಿ ಬಲಿಯಾದ ಯುವಕ, ಗಾಯಗೊಂಡವರು ಪರಸ್ಪರ ಪರಿಚಯಸ್ಥರು ಎಂದು ಕ್ಷೇತ್ರದ ಮಾಜಿ ಕಾರ್ಪೊರೇಟರ್ ಕಮಲೇಶ್ ಯಾದವ್ ಹೇಳಿದ್ದಾರೆ.

ಇನ್ನು, ನಾಲ್ಕು ಸುತ್ತಿನ ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅಂಕಿತ್ ಯಾದವ್ ಎಂದು ಹೇಳಲಾಗುತ್ತಿದೆ. ಉಳಿದ ಮೂವರು ಗಾಯಾಳುಗಳ ಹೆಸರು ಅಭಿನಾಸ್ ದಾಭೋಲ್ಕರ್, ಮನೀಶ್ ಗುಪ್ತಾ ಮತ್ತು ಪ್ರಕಾಶ್ ನಾರಾಯಣ್ ಎಂದು ತಿಳಿದುಬಂದಿದೆ.

ಹಳೆ ದ್ವೇಷವೇ ಘಟನೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸ್‌ ಡಿಸಿಪಿ ವಿಶಾಲ್ ಠಾಕೂರ್ ಮಾತನಾಡಿ, ಬೈಕ್‌ನಲ್ಲಿ ಬಂದ ಹುಡುಗರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಘಟನೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ಮಧ್ಯರಾತ್ರಿ 12ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ: ಐವರು ಸಾವು

ABOUT THE AUTHOR

...view details