ಕರ್ನಾಟಕ

karnataka

ETV Bharat / bharat

ಚಂಪಾರಣ್​​ ಸತ್ಯಾಗ್ರಹ ಪ್ರಾರಂಭವಾದ ಸ್ಥಳದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ - Mahatma Gandhi statue vandalised in Bihar

ಪ್ರತಿಮೆ ಧ್ವಂಸ ಆದ ಸ್ಥಳದಲ್ಲಿ ಭಾನುವಾರ ರಾತ್ರಿ ಧಾರ್ಮಿಕ ಘೋಷಣೆಗಳು ಕೂಕಿದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ, ಬಲಪಂಥೀಯರ ಕೃತ್ಯದಂತೆ ಕಂಡುಬರುತ್ತದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಸತ್ ಕಪಿಲ್ ಅಶೋಕ್ ಹೇಳಿದ್ದಾರೆ.

mahatma gandhis statue vandalised
ಚರ್ಖಾ ಪಾರ್ಕ್‌ನಲ್ಲಿದ್ದ ಮಹತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸ

By

Published : Feb 15, 2022, 4:09 PM IST

ಮೋತಿಹಾರಿ(ಬಿಹಾರ): ಇಲ್ಲಿನಚರ್ಖಾ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಹಾನಿಗೊಳಗಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್​ ಕಪಿಲ್ ಅಶೋಕ್ ಮಾತನಾಡಿ, ಸಾಮಾಜಿಕ ಜಾತಾಣಗಳಲ್ಲಿ ಭಾನುವಾರ ರಾತ್ರಿ ಚರ್ಖಾ ಪಾರ್ಕ್‌ ಬಳಿ ಧಾರ್ಮಿಕ ಘೋಷಣೆಗಳು ಕೂಗಿರುವ ಬಗ್ಗೆ ಮಾಹಿತಿಗಳಿವೆ. ಇದರಲ್ಲಿ ಕೆಲ ಗುಂಪಿನ ಒಳಗುಳ್ಳುವಿಕೆ ಕಂಡುಬರುತ್ತಿದೆ ತನಿಖೆಯಿಂದ ಸರಿಯಾದ ಮಾಹಿತಿ ತಿಳಿಯಲಿದೆ ಎಂದರು.

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಉದ್ಯಾನದ ನಿರ್ವಹಣಾ ಕಾರ್ಯ ನಡೆಸುತ್ತಿದೆ. ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ನಾವು ಅವರಿಗೆ ಸಲಹೆ ನೀಡುತ್ತೇವೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಖಚಿತಪಡಿಸಿಕೊಳ್ಳಲಾಗುವುದು. ಜಿಲ್ಲಾಡಳಿತವು ಪ್ರತಿಮೆ ಮರು ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು. 1917ರಲ್ಲಿ ಬ್ರಿಟೀಷರ ವಿರುದ್ಧವಾಗಿ ಮೊದಲ ಸತ್ಯಾಗ್ರಹವನ್ನು ಮಹತ್ಮ ಗಾಂಧಿ ಚಂಪಾರಣ್ಯದಲ್ಲಿ ಪ್ರಾರಂಭಿಸಿದ್ದರು.

For All Latest Updates

TAGGED:

ABOUT THE AUTHOR

...view details