ಔರಂಗಾಬಾದ್(ಬಿಹಾರ): ಆಧುನಿಕತೆ ತಂತ್ರ ಮುಂದುವರಿದಂತೆ ಹೊಸ ಹೊಸ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಿಂದಿನ ದಿಗಳಲ್ಲಿದ್ದ ಕೇವಲ ವಿವಿಧ ಅಂಗಡಿ ಅಥವಾ ವಿವಿಧ ಕಂಪನಿ, ಕೃಷಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿದ್ದ ಇಂದಿನ ಯುವಜನರು ಹೊಸದೃಷ್ಟಿಕೋನ ಬೆಳೆಸಿಕೊಂಡು ಸ್ವ ಉದ್ಯೋಗದತ್ತ ಹೆಜ್ಜೆ ಇಟ್ಟಿದ್ದಾರೆ.
ಮನುಷ್ಯನಿಗೆ ಮೂಲಭೂತವಾಗಿರುವ ರೊಟ್ಟಿ, ಬಟ್ಟೆ, ಮನೆ ಅವಶ್ಯಕತೆಗೆ ಮಾತ್ರ ಸೀಮಿತವಾಗಿಲ್ಲ. ಇಂದು ನಾವೀನ್ಯ ಬದುಕು ನಡೆಸಲೂ ಹಾತೂರೆಯತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮವೂ(ಸೋಷಿಯಲ್ ಮೀಡಿಯಾ) ಕೂಡ ಹಣ ಗಳಿಕೆಯ ಸಾಧನವಾಗಿ ರೂಪುಗೊಂಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ತಮ್ಮ ಪ್ರತಿಭೆಯ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅವರಲ್ಲಿ ಬಿಹಾರದ ಔರಂಗಾಬಾದ್ ಜಿಲ್ಲೆಯ ಹುಡುಗ ಹರ್ಷ ರಜಪೂತ್ ಕೂಡ ಒಬ್ಬರು ಸಾಕ್ಷಿ. ಈತನು ಯೂಟ್ಯೂಬ್ @harshrajputin ಆರಂಭಿಸಿದ್ದು, ಇದರಿಂದ ಬಂದ ಆದಾಯದಿಂದ ಆಡಿ ಕಾರನ್ನು ಖರೀದಿಸಿ ರೋಲ್ ಮಾಡಲ್ ಆಗಿ ಹೊರಹೊಮ್ಮಿದ್ದಾರೆ.
ರಜಪೂತ್ ಹರ್ಷನ ಯೂಟ್ಯೂಬ್ ಪಯಣ: ಹರ್ಷ ರಜಪೂತ್ ಅವರು ಯೂಟ್ಯೂಬ್ದಿಂದ ಬಂದ ಹಣದ ಗಳಿಕೆಯಿಂದ ಆಡಿ ಕಾರು ಖರೀದಿಸಿದ್ದಾರೆ. ಬಹುಶಃ ಯೂಟ್ಯೂಬ್ದಲ್ಲಿ ರಜಪೂತ್ ಕಥೆ ಇಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಂದು ಎಲ್ಲರೂ ಹರ್ಷ ಯಾರು ಎಂದು ತಿಳಿಯಲು ಇಷ್ಟಪಡುತ್ತಾರೆ? ಅಷ್ಟಕ್ಕೂ ನಿಜವಾಗಿಯೂ ಈ ಹರ್ಷನೂ 50 ಲಕ್ಷದ ಆಡಿ ಕಾರನ್ನು ಖರೀದಿಸಿದ್ದಾನಾ ? ಎಂದು ಸರ್ಚ್ ಮಾಡಲು ಆರಂಭಿಸಿದ್ದಾರೆ.
ಹರ್ಷ ರಜಪೂತ್ ಬಿಹಾರದ ಔರಂಗಾಬಾದ್ ಜಿಲ್ಲೆಯ ಜಸೋಯಾ ಗ್ರಾಮದ ನಿವಾಸಿ. ಯೂಟ್ಯೂಬ್‌ನಲ್ಲಿ ಹರ್ಷ್ ಅವರ ಮೊದಲ ವೀಡಿಯೊ 2020 ರಲ್ಲಿ ವೈರಲ್ ಮಾಡಿದ್ದನ್ನೂ ಜನರು ಕೊರೊನಾ ಅವಧಿಯಲ್ಲಿ ವೀಕ್ಷಿಸಿದ್ದಾರೆ. ಇಲ್ಲಿಂದ ಹರ್ಷನ ಪಯಣ ಶುರುವಾಯಿತು. ತಮ್ಮ ಸಾಧನೆ ಬಗ್ಗೆ ಈಟಿವಿ ಭಾರತದೊಂದಿಗೆ ಹರ್ಷ ರಜಪೂತ್ ಮಾತನಾಡಿದ್ದಾರೆ. ಅವರ ಚಾನೆಲ್‌ನ ಹೆಸರು ಹರ್ಷ ರಜಪೂತ್ ಎಂದು ಹೇಳಿದ್ದು, ಲಾಕ್‌ಡೌನ್ ಸಮಯದಲ್ಲಿ ಡೈರಿ ಮಿಲ್ಕ್‌ನ ಮೊದಲ ವಿಡಿಯೊ ವೈರಲ್ ಆಯಿತು. ಆದರೆ ಹೆಚ್ಚು ಕ್ರೆಡಿಟ್ ಪಡೆಯಲಿಲ್ಲ. ಆದರೆ ಕೋವಿಡ್ ವೇಳೆ ವರನ ಮೇಲೆ ಹಲ್ಲೆ ನಡೆಸಿರುವ ನನ್ನ ಹಾಸ್ಯ ವಿಡಿಯೋ ಭಾರೀ ವೈರಲ್ ಆಯಿತು ಎಂದು ತಮ್ಮ ಸಾಧನೆಯ ನೆನಪು ಮಾಡಿಕೊಂಡರು.
ಇದಾದ ನಂತರ ನನ್ನ ವಿಡಿಯೋಗಳನ್ನು ವೀಕ್ಷಿಸಲೂ ಜನರು ಆರಂಭಿಸಿದರು. ಇದಾದ ಬಳಿಕ 2021 ರಲ್ಲಿ, ಕೋವಿಡ್ ನಿಯಮದ ಶಿಷ್ಟಾಚಾರ ಅನುಸರಿಸದ ವ್ಯಕ್ತಿಯನ್ನೂ ನದಿಯ ದಡಕ್ಕೆ ಕರೆದು ಹೊಡೆದಿರುವ ಹಾಸ್ಯದ ವಿಡಿಯೊ ಕೂಡಾ ಬಹಳಷ್ಟು ಜನರಿಂದ ವೀಕ್ಷಣೆಗೆ ಒಳಪಟ್ಟಿತು ಅಂತಾರೆ ಯೂಟ್ಯೂಬರ್ ಹರ್ಷ ರಜಪೂತ್.
ವಿಡಿಯೋದಲ್ಲಿ ಹಾಸ್ಯದ ಸಮ್ಮಿಲನ: ಹರ್ಷ ರಜಪೂತ್ ಅವರ ಮಾಡಿರುವ ಯೂಟ್ಯೂಬ್ ವಿಡಿಯೋವು ಘಟನೆಯ ವಿವರ ಹಾಗೂ ಹಾಸ್ಯದೊಂದಿಗೆ ವಿವರಣೆ ಮಾಡುವುದು ನನ್ನ ವಿಡಿಯೋಗಳು ಹೆಚ್ಚಿನ ವೀಕ್ಷಣೆಗೆ ಕಾರಣ ಅಂತಾರೆ ಹರ್ಷ. ಹರ್ಷ ತಮ್ಮ ವಿಡಿಯೊದಲ್ಲಿ ತುಂಬಾ ನಿಂದನೆ ಮತ್ತು ಹಾಸ್ಯವನ್ನು ಬೆರೆಸಿಕೊಂಡಿದ್ದಾರೆ. ತಮ್ಮ ಹಾಸ್ಯ ಭರಿತ ವಿವರಣೆಗೆ ದಾಸರಾದ ಜನ ನನ್ನ ಹೆಚ್ಚೆಚ್ಚು ವಿಡಿಯೋಗಳನ್ನು ನೋಡಿ ಅದರ ದಾಸರಾದರು. ಇಂದು ಪ್ರತಿಯೊಬ್ಬರೂ ಅವರ ವಿಡಿಯೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಇದರೊಂದಿಗೆ 27 ವರ್ಷದ ಹರ್ಷ ರಜಪೂತ್ ಅವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚುತ್ತಿದೆ.