ನವದೆಹಲಿ: ರಾಷ್ಟ್ರವು ಕೋವಿಡ್ ವಿರುದ್ಧ ಹೋರಾಡುತ್ತಲೇ ಇರುವುದರಿಂದ, ಹಲವಾರು ಸೆಲೆಬ್ರಿಟಿಗಳು ಒಟ್ಟಾಗಿ ಭಾರತಕ್ಕೆ ಹಣ ಸಂಗ್ರಹಿಸಲು ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡಿದ್ದಾರೆ. ಆದಾಗ್ಯೂ, ನೆಟಿಜನ್ಸ್ ಗಳು ಗುರಿಯಾಗಿಸಿಕೊಂಡಿದ್ದಾರೆ, ಸೆಲೆಬ್ರೆಟಿಗಳು ಭಾರತದಲ್ಲಿ ಕೋವಿಡ್ ಪರಿಹಾರ ನಿಧಿಗೆ ಕೊಡುಗೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಾಲಿವುಡ್ ನಟ ಅಮಿತಾಬ್ಗೆ ಕೂಡ ಈ ರೀತಿಯ ನಿಂದನೀಯ ಕಮೆಂಟ್ಗಳು ಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ರೀತಿಯ ಕಾಮೆಂಟ್ಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ದಾನ ಮಾಡಿಕೊಂಡು ಸುಮ್ಮನ್ನಿರುವುದು ಲೇಸು ಎಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರ ಕುಟುಂಬ ನೀಡಿದ ಕೊಡುಗೆಗಳ ಬಗ್ಗೆ ಹೇಳಿದ್ದಾರೆ.
1500 ಕ್ಕೂ ಹೆಚ್ಚು ರೈತರ ಬ್ಯಾಂಕ್ ಸಾಲಗಳನ್ನು ತೀರಿಸಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದಿದ್ದೇನೆ ಎಂದಿದ್ದಾರೆ. ಹುತಾತ್ಮರಾದ ದೇಶದ ಗಡಿ ಕಾದ ಸೈನಿಕರ ಕುಟುಂಬಗಳು, ಅವರ ಮಕ್ಕಳು, ಕೆಲವು ಗರ್ಭಿಣಿಯರಿಗೆ ಸಹಾಯ ಮಾಡಿದ್ದೇನೆ. ಪುಲ್ವಾಮಾ ಹುತಾತ್ಮರ ಕುಟುಂಬಗಳನ್ನು ಸಂಪರ್ಕಿಸಿ ಅವರಿಗೆ ಸಹಾಯ ಮಾಡಿದ್ದೇನೆ.
ದೇಶದಲ್ಲಿ 400,000 ಕ್ಕೂ ಹೆಚ್ಚು ದೈನಂದಿನ ಕೂಲಿ ಮಾಡುವವರಿಗೆ ಒಂದು ತಿಂಗಳ ಕಾಲ ಆಹಾರವನ್ನು ಒದಗಿಸುತ್ತಿದ್ದಾರೆ.. ನಗರದಲ್ಲಿ ಪ್ರತಿದಿನ 5000 ಜನರಿಗೆ ಎರಡು ಹೊತ್ತು ಊಟ ನೀಡಲಾಗುತ್ತಿದೆ. ಚಿಕ್ಕ ಮಕ್ಕಳು ಹೆತ್ತವರ ಹಠಾತ್ ಮರಣದಿಂದ ಅನಾಥರಾಗಿದ್ದಾರೆ ಆ ಮಕ್ಕಳನ್ನು ದತ್ತು ಪಡೆದು ಸಾಕಲಾಗುತ್ತಿದೆ. ಅವರ ಶಿಕ್ಷಣ ಮತ್ತು ವಸತಿ ನೋಡಿಕೊಳ್ಳಲಾಗುತ್ತಿದೆ.
ಕೊರೊನಾ ವಾರಿಯರ್ಸ್ಗೆ ಮಾಸ್ಕ್, ಪಿಪಿಇ ಕಿಟ್ಗಳು, ಸಿಖ್ ಸಮಿತಿಗೆ ದೇಣಿಗೆ ನೀಡುವುದು ವಲಸಿಗರಿಗೆ ಮನೆಗೆ ಹಿಂದಿರುಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ಯುಪಿ ಮತ್ತು ಬಿಹಾರಕ್ಕೆ ತೆರಳಲು 30 ಬಸ್ಗಳನ್ನು ಕಾಯ್ದಿರಿಸಿ ರಾತ್ರಿಯ ಪ್ರಯಾಣಕ್ಕಾಗಿ ಆಹಾರ ಮತ್ತು ನೀರು ವ್ಯವಸ್ಥೆ ಮಾಡಿದರು. 2,800 ವಲಸೆ ಪ್ರಯಾಣಿಕರನ್ನು ಉಚಿತವಾಗಿ ಮುಂಬಯಿಯಿಂದ ಯುಪಿಗೆ ರೈಲಿನಲ್ಲಿ ಕಳುಹಿಸಲಾಗಿದೆ.
ಅಮಿತಾಬ್ ಬಚ್ಚನ್ ಅವರು ದೆಹಲಿಯ ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಆರೈಕೆ ಕೇಂದ್ರಕ್ಕೆ ಅಮಿತಾಬ್ ಬಚ್ಚನ್ ವಿದೇಶದಿಂದ ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಿ ದೇಣಿಗೆ ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ಸಮಿತಿಯ ಅಧ್ಯಕ್ಷ- ಮಂಜಿಂದರ್ ಸಿಂಗ್ ಸಿರ್ಸಾ ಅವರು ತಮ್ಮ ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.