ಕರ್ನಾಟಕ

karnataka

By

Published : Dec 12, 2022, 2:28 PM IST

ETV Bharat / bharat

ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ.. ಪಿಎಂ ಮೋದಿ, ಅಮಿತ್​ ಶಾ, ಬೊಮ್ಮಾಯಿ ಭಾಗಿ

ಗುಜರಾತ್​ನ 18ನೇ ಮತ್ತು 2ನೇ ಬಾರಿಗೆ ಸಿಎಂ ಆಗಿ ಭೂಪೇಂದ್ರ ಪಟೇಲ್​ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಬಾರಿ ಗುಜರಾತ್​ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿತ್ತು.

Bhupendra Patel takes oath as the Chief Minister  Chief Minister of Gujarat for second time  BJP leader Bhupendra Patel oath ceremony  ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ  ಸಿಎಂ ಆಗಿ ಭೂಪೇಂದ್ರ ಪಟೇಲ್​ ಅವರು ಪ್ರಮಾಣವಚನ  ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ  ಬಿಜೆಪಿ ಸತತ 7 ನೇ ಬಾರಿಗೆ ಅಧಿಕಾರದ ಗದ್ದುಗೆ  ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪದಗ್ರಹಣ  ಸಚಿವ ಸಂಪುಟದ ಸಮೇತ ರಾಜೀನಾಮೆ
ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ

ಗಾಂಧಿನಗರ (ಗುಜರಾತ್​): ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ಬಿಜೆಪಿ ಸತತ 7 ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಹೊಸ ಸರ್ಕಾರದ ಮತ್ತು 18 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪದಗ್ರಹಣ ಮಾಡಿದರು. ಇದೇ ವೇಳೆ, ಅವರೊಂದಿಗೆ ಕೆಲ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸಭೆಯ 182 ಸ್ಥಾನಗಳ ಪೈಕಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆದ್ದು ಚರಿತ್ರೆ ಸೃಷ್ಟಿಸಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿರುವ ಪಾಟೀದಾರ್​ ಸಮುದಾದಯ ಭೂಪೇಂದ್ರ ಪಟೇಲ್​ ದಾಖಲೆಯ 1.90 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದೂ ದಾಖಲೆಯೇ. ಈ ಎಲ್ಲ ದಾಖಲೆಗಳ ಮಧ್ಯೆ ಬಿಜೆಪಿ ರಾಜ್ಯದಲ್ಲಿ ಮತ್ತೆ 5 ವರ್ಷಗಳ ಕಾಲ ಅಧಿಕಾರ ನಡೆಸಲಿದೆ. ಈ ಮೂಲಕ ಪಶ್ಚಿಮಬಂಗಾಳದಲ್ಲಿ ಎಡರಂಗದ ಸತತ ಅಧಿಕಾರದ ದಾಖಲೆಯನ್ನು ಬಿಜೆಪಿ ಸರಿಗಟ್ಟಿದೆ.

ಪ್ರಧಾನಿ ಮೋದಿ, ಅಮಿತ್​ ಶಾ ಭಾಗಿ:ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯುವ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕರ್ನಾಟಕದಿಂದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಚುನಾವಣೆಯ ಫಲಿತಾಂಶದ ಮರುದಿನ (ಡಿಸೆಂಬರ್ 9​) ಸಿಎಂ ಭೂಪೇಂದ್ರ ಪಟೇಲ್​ ಅವರು ತಮ್ಮ ಸಚಿವ ಸಂಪುಟದ ಸಮೇತ ರಾಜೀನಾಮೆ ಸಲ್ಲಿಸಿದ್ದರು. ಡಿಸೆಂಬರ್​ 10 ರಂದು ಶಾಸಕಾಂಗ ಸಭೆ ನಡೆದು ಭೂಪೇಂದ್ರ ಪಟೇಲ್​ ನಾಯಕರಾಗಿ ಆಯ್ಕೆಯಾದರು. ಬಳಿಕ ರಾಜಭವನಕ್ಕೆ ತೆರಳಿದ ಬಿಜೆಪಿ ಶಾಸಕರು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡಿದರು. ನಿಗದಿಯಂತೆ ಇಂದು ಪದಗ್ರಹಣ ಸಮಾರಂಭ ನಡೆದಿದ್ದು, ನೂತನ ಸಿಎಂ ಆಗಿ ಪ್ರಮಾಣವಚಣ ಸ್ವೀಕರಿಸಿದರು. ಇವರೊಂದಿಗೆ 20 ಕ್ಯಾಬಿನೆಟ್ ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.

ಓದಿ:ವಿಶ್ವದ ಅತಿ ಎತ್ತರದ ಏಕತೆಯ ಪ್ರತಿಮೆ ವೀಕ್ಷಿಸಿದ ಬಿಎಸ್​ವೈ

ABOUT THE AUTHOR

...view details