ಕರ್ನಾಟಕ

karnataka

ETV Bharat / bharat

ಜಸ್ಟ್‌ 1 ಗಂಟೆ! ಮುಂಬೈ ಟು ಲಂಡನ್‌.. ಈ ಸೂಪರ್‌ಸಾನಿಕ್‌ ಫ್ಲೈಟ್‌ ವೇಗ ಪ್ರತಿ ಗಂಟೆಗೆ 38,800 ಮೈಲ್ಸ್‌

ಮುಂಬೈನಿಂದ ಲಂಡನ್‌ಗೆ ಹೋಗಲು ವಿಮಾನ ತೆಗೆದುಕೊಳ್ಳುವ ಅವಧಿ 8 ರಿಂದ 11 ಗಂಟೆ. ಆದರೆ, ಲಂಡನ್‌ನ ರಿಯಾಕ್ಷನ್‌ ಎಂಜಿನ್ಸ್‌ ಲಿಮಿಟೆಡ್ ಕಂಪನಿ ಈ ದೀರ್ಘ ಅವಧಿಯನ್ನ ಕಡಿಮೆ ಮಾಡಿದೆ.

ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸೊನಿಕ್​

By

Published : Apr 26, 2019, 10:27 AM IST

Updated : Apr 26, 2019, 1:42 PM IST

ಮುಂಬೈ: ಮುಂಬೈನಿಂದ ಲಂಡನ್‌ಗೆ ಹೋಗ್ಬೇಕಿದ್ರೇ 8 ರಿಂದ 11 ಗಂಟೆ ಬೇಕಾಗುತ್ತೆ. ಆದರೆ, ಒಂದೇ ಒಂದು ಗಂಟೆಯಲ್ಲಿ ಹೋಗೋಕೆ ಸಾಧ್ಯವಾ? ಹೌದು, ಇದನ್ನ ಸಾಧ್ಯವಾಗಿಸುತ್ತಿದೆ ಹೊಸ ಸೊಪರ್‌ಸಾನಿಕ್‌ ವಿಮಾನ.

ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸಾನಿಕ್​

ವಿಮಾನದಲ್ಲಿ ಭಾರತದ ಯಾವುದೇ ಭಾಗದಿಂದ ಲಂಡನ್‌ಗೆ ಹೋಗಬೇಕಿದ್ರೇ 8 ರಿಂದ 11 ಗಂಟೆ ಬೇಕು. ಆದರೆ, ಇನ್ಮೇಲೆ ಅಷ್ಟೊಂದು ಸಮಯ ಬೇಕಾಗಿಲ್ಲ. ಲಂಡನ್‌ನ ಆಕ್ಸ್‌ಫರ್ಡ್‌ಶೈರ್‌ನಲ್ಲಿರುವ ಬ್ರಿಟೀಷ್‌ ವಿಮಾನ ನಿರ್ಮಾಣ ಕಂಪನಿ 'ರಿಯಾಕ್ಷನ್‌ ಎಂಜಿನ್ಸ್‌ ಲಿಮಿಟೆಡ್' ಹೊಸ ಸೊಪರ್‌ಸಾನಿಕ್‌ ವಿಮಾನಗಳನ್ನ ತಯಾರಿಸಿದೆ. ಇದೇ ಸೊಪರ್‌ಸಾನಿಕ್‌ ವಿಮಾನಗಳು ಮುಂಬೈನಿಂದ ಲಂಡನ್‌ಗೆ ಬರೀ 1 ಗಂಟೆಯಲ್ಲೇ ಪ್ರಯಾಣಿಕರನ್ನ ಹೊತ್ತೊಯ್ಯಲಿದೆ. ಅಂದುಕೊಂಡಂತೆ ಕಾರ್ಯಾರಂಭ ಮಾಡಿದ್ರೇ ಆದಷ್ಟು ಬೇಗ ಇದು ಕೈಗೂಡಲಿದೆ. ಹೆಚ್ಚು ಗಂಟೆ ವಿಮಾನದಲ್ಲಿ ಪ್ರಯಾಣಿಸುವ ಪ್ರಮೇಯ ಇನ್ಮೇಲೆ ಬೀಳೋದಿಲ್ಲ.

ಹಾರಲು ಸಿದ್ಧವಾಗುತ್ತಿದೆ ಹೊಸ ಸೂಪರ್​ಸಾನಿಕ್​
ಸೂಪರ್‌ಸಾನಿಕ್‌ ಯಂತ್ರದ ನೀಲನಕ್ಷೆ

ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಯಲ್ಲಿ ಪಾಸ್ :

ಸೂಪರ್‌ಸಾನಿಕ್‌ ಯಂತ್ರದ ನೀಲನಕ್ಷೆ
ಸೂಪರ್‌ಸಾನಿಕ್‌ ಒಳಭಾಗ

ಸೊಪರ್‌ಸಾನಿಕ್‌ ವಿಮಾನಗಳು ಪ್ರತಿ ಗಂಟೆಗೆ 38,800 ಮೈಲ್ಸ್‌ನಷ್ಟು ಅತೀ ವೇಗದಲ್ಲಿ ಹಾರಾಟ ನಡೆಸುತ್ತೆ. ಸೊಪರ್‌ಸಾನಿಕ್‌ವಿಮಾನದ ಸಾಬರ್‌ ಯಂತ್ರದ ಕೂಲಿಂಗ್‌ ಸಿಸ್ಟಂ ಪರೀಕ್ಷೆಗೊಳಪಡಿಸಲಾಗಿದ್ದು, ಅದೂ ಕೂಡ ಅದ್ಭುತವಾಗಿದೆ ಅಂತಾ ರಿಯಾಕ್ಷನ್ ಎಂಜಿನ್ಸ್‌ ಕಂಪನಿ ಹೇಳಿಕೊಂಡಿದೆ. ಈ ವಿಮಾನ ಅತೀ ವೇಗದಲ್ಲಿ ಹಾರಾಟ ನಡೆಸುವುದರಿಂದ ಎಂಜಿನ್‌ ಅತೀ ಹೆಚ್ಚು ಹೀಟಾಗುತ್ತೆ. ಅದೇ ಕಾರಣಕ್ಕೂ ಈವರೆಗೂ ಹೈಪರ್‌ಸಾನಿಕ್‌ವಿಮಾನ ಹಾರಾಟ ನಡೆಸುವುದು ಬರೀ ಕನಸಾಗಿತ್ತು. ಈ ವಿಮಾನದ ಸೌಂಡ್‌ ನಿಜಕ್ಕೂ ಅತ್ಯಾಕರ್ಷಕವಾಗಿದೆ. ಇದರಲ್ಲಿ ಪ್ರಯಾಣ ಮಾಡೋದು ವೆಚ್ಚದಾಯಕವೇನೋ ನಿಜ. ಆದರೆ, ಕ್ರಮೇಣ ಸಾಮಾನ್ಯ ಪ್ರಯಾಣಿಕರಿಗೆ ಕೈಗೆಟಕುವುದರದಲ್ಲಿ ಟಿಕೆಟ್‌ ಸಿಗುತ್ತೆ ಅಂತಾ ಹೇಳಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಮಾನ ರೂಪರೇಷೆ ಸಿದ್ಧಗೊಳ್ಳುತ್ತೆ. ಆ ಬಳಿಕ ವಿಮಾನ ಹಾರಾಟವನ್ನ ನಡೆಸಲಿದೆ. ಇದೇನಾದರೂ ಹಾರಾಟ ನಡೆಸೋದಕ್ಕೆ ಶುರು ಮಾಡಿದ್ರೇ ಪ್ರಯಾಣಿಕರಿಗೆ ಎಷ್ಟೊಂದು ಸಮಯ ಉಳಿಯುತ್ತೆ ಅಲ್ವೇ..

Last Updated : Apr 26, 2019, 1:42 PM IST

ABOUT THE AUTHOR

...view details