ಕರ್ನಾಟಕ

karnataka

ETV Bharat / bharat

ಡೈಮಂಡ್​ ನಗರಿಯಲ್ಲಿ ತಯಾರಾಯ್ತು ವಿಶ್ವದ ದುಬಾರಿ ವಜ್ರದುಂಗುರ!

ವಿಶ್ವದ ಅತ್ಯಂತ ದುಬಾರಿ ವಜ್ರದ ಉಂಗುರದ ಬೆಲೆ ಎಷ್ಟಿರಬಹುದು? ಅದನ್ನು ನಮ್ಮ ದೇಶದಲ್ಲೇ ತಯಾರಿಸಿರಬಹುದೇ? ಈ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ, ಅತ್ಯಂತ ದುಬಾರಿ ವಜ್ರದುಂಗುರವನ್ನು ಡೈಮಂಡ್ ಸಿಟಿ ಸೂರತ್​ನಲ್ಲಿ ತಯಾರಿಸಲಾಗಿದೆ. ಈ ಉಂಗುರವನ್ನು ಲೋಟಸ್ ರಿಂಗ್ ಎಂದು ಕರೆಯಲಾಗುತ್ತಿದೆ.

ವಿಶ್ವದ ದುಬಾರಿ ವಜ್ರದುಂಗುರ

By

Published : Oct 5, 2019, 6:50 PM IST

ಸೂರತ್​(ಗುಜರಾತ್​) : 'ಡೈಮಂಡ್​ ಸಿಟಿ' ಸೂರತ್​ ಡೈಮಂಡ್​ ವಿಚಾರದಲ್ಲಿ ಗಿನ್ನೆಸ್​ ದಾಖಲೆ ಬರೆದಿದೆ. ನಗರದ ಆಭರಣ ಮಳಿಗೆಯಲ್ಲಿ ತಯಾರಿಸಿರುವ ವಜ್ರದುಂಗುರ ದಾಖಲೆಗೆ ಕಾರಣವಾಗಿದೆ.

ಸೂರತ್​ನ ವಿಶಾಲ್​ ಅಗರ್ವಾಲ್​ ಹಾಗೂ ಖುಶ್ಬೂ ಅಗರ್ವಾಲ್​ ದುಬಾರಿ ವಜ್ರದುಂಗುರವೊಂದನ್ನು ಡಿಸೈನ್​ ಮಾಡಿದ್ದಾರೆ. ಇದನ್ನು ಕಮಲದ ಹೂವಿನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಲೋಟಸ್​ ಡೈಮಂಡ್​​ ರಿಂಗ್​(ಕಮಲದುಂಗುರ) ಎಂದೇ ಹೇಳಲಾಗುತ್ತಿದೆ. ಇದರ ಬೆಲೆ ಕೇಳಿದ್ರೆ ನೀವು ಶಾಕ್​ ಆಗ್ತೀರಾ. ಯಾಕಂದ್ರೆ, ಇದರ ಮೌಲ್ಯ ಬರೋಬ್ಬರಿ 29 ಕೋಟಿ ರೂಪಾಯಿ!

ಇಷ್ಟೊಂದು ದುಬಾರಿ ಬೆಲೆಯ ವಜ್ರದ ಉಂಗುರವನ್ನು ಜಗತ್ತಿನ ಯಾವುದೇ ಭಾಗದಲ್ಲಿ ಇದುವರೆಗೆ ತಯಾರಿಸಿಲ್ಲ. ಹೀಗಾಗಿ ದೇಶದ ವಜ್ರದ ನಗರಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ವಜ್ರದ ಉಂಗುರ 2018ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದೆ.

ವಿಶ್ವದ ದುಬಾರಿ ವಜ್ರದುಂಗುರ

ಗುಜರಾತ್​ನ ಸೂರತ್​ನಲ್ಲಿರುವ ಈ ವಜ್ರದ ಉಂಗುರ ವಿಶ್ವದ ಅತ್ಯಂತ ದುಬಾರಿ ವಜ್ರದ ಉಂಗುರ ಎಂದು ಗುರುತಿಸಲ್ಪಟ್ಟಿದೆ. ಸದ್ಯ ಈ ಕಮಲದ ಉಂಗುರ ಹಾಲಿವುಡ್‌ನಿಂದ ಹಿಡಿದು ಬಾಲಿವುಡ್‌ಗೆ ನಟಿಯರನ್ನೂ ಆಕರ್ಷಿಸುತ್ತಿದೆ. ಉಂಗುರ ತಯಾರಿಸುವ ವಜ್ರ ಕಂಪನಿ 6690 ವಜ್ರದ ತುಣುಕುಗಳೊಂದಿಗೆ ತಯಾರಿಸಿದೆ.

ಈ ಉಂಗುರ ಕೇವಲ 58 ಗ್ರಾಂ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಉಂಗುರ ವಿನ್ಯಾಸಕರು 6 ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ, ಈ ಕಮಲದ ಉಂಗುರವನ್ನೇ ವಿನ್ಯಾಸಕರು ವಿನ್ಯಾಸ ಮಾಡಲು ಕಾರಣವೂ ಇದೆಯಂತೆ. ಇದರ ಮುಖ್ಯ ಉದ್ದೇಶ ಜಲ ಸಂರಕ್ಷಣೆ ಎಂದು ವಿನ್ಯಾಸಕರು ಹೇಳಿದ್ದಾರೆ. ಕಮಲ ದೇಶದ ರಾಷ್ಟ್ರೀಯ ಹೂವಾಗಿದ್ದು, ಈ ಮೂಲಕ ಜಲಸಂರಕ್ಷಣೆಯ ಸಂದೇಶ ಇದೆ ಎಂದು ಉಂಗುರ ತಯಾರಕರು ತಿಳಿಸಿದ್ದಾರೆ.

ABOUT THE AUTHOR

...view details