ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ: ಹಿರಿ ಜೀವಗಳ ಮೇಲಿರಲಿ ಆರೈಕೆ - World Elder Day news

ಸಕ್ರಿಯ ಮತ್ತು ಆರೋಗ್ಯಕರ ವಯಸ್ಸಾದ ಪರಿಕಲ್ಪನೆಯೊಂದಿಗೆ ವಯೋವೃದ್ಧರಿಗೆ ಸುಲಭವಾಗಿ, ಉತ್ತಮ-ಗುಣಮಟ್ಟದ ದೀರ್ಘಾವಧಿ ಮತ್ತು ಮೀಸಲಾದ ಆರೈಕೆ ಸೇವೆಗಳನ್ನು ಒದಗಿಸುವುದಕ್ಕಾಗಿ ಆರೋಗ್ಯ ಇಲಾಖೆಯು ರಾಷ್ಟೀಯ ವಯೋವೃದ್ದರ ಆರೋಗ್ಯ ಆರೈಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.

World Elder Day ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ
ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ

By

Published : Oct 1, 2020, 7:00 AM IST

ಬೆಂಗಳೂರು: ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನ ಅಕ್ಟೋಬರ್ 1 ರಂದು ಜಗತ್ತಿನಾದ್ಯಂತ ಜಾಗತಿಕ ಹಿರಿಯ ನಾಗರಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಲ್ಲದೆ ಈ ದಿನವು 2020-2030ರ ಹಿರಿಯರ ದಶಕ (Elderly Decade) ಎಂದು ಪರಿಗಣಿಸಲಾಗಿರುವ ಸಂದರ್ಭದ ಮೊದಲನೆಯ ದಿನವೂ ಆಗಿದೆ.

2020-2030 ಹಿರಿಯರ ದಶಕ:ಪ್ರಸ್ತುತ ದಶಕವು ಸುಸ್ಥಿರ ಅಭಿವೃದ್ಧಿ ಭಾಗವಾಗಿ ಹಿರಿಯರನ್ನು ಎಲ್ಲಾ ಹಂತದಲ್ಲಿ ಸಕ್ರಿಯವಾಗಿ ಒಳಗೊಳ್ಳುವ ಮತ್ತು ಹಿರಿಯರಿಗೆ ಸೂಕ್ತ ವಾತಾವರಣ ಕಲ್ಪಿಸುವ ಅವಕಾಶವಾಗಿದೆ. ಹಿರಿಯರ ಸಂಖ್ಯೆ ಆರೋಗ್ಯ ವೃದ್ಧಿ ಕೂಡ ಏರುಗತಿಯಲ್ಲಿ ಸಾಗುತ್ತಿದೆ. 2020 ನೇ ಇಸವಿಯಲ್ಲಿ 60 ವರ್ಷ ತುಂಬಿದ ಹಿರಿಯರ ಸಂಖ್ಯೆ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯನ್ನು ಮೀರುತ್ತಿದೆ.

2020-2030 ರ ಆರೋಗ್ಯಕರ ಹಿರಿಯರ ದಶಕ ಎಂದು ಗುರುತಿಸಲಾಗಿದ್ದು, ನಾಗರಿಕ ಸಮಾಜ, ಸರ್ಕಾರೇತರ ಸಂಸ್ಥೆ (ಎನ್​ಜಿಓ), ವೃತ್ತಿಪರರು, ಮಾಧ್ಯಮಗಳು ಮತ್ತು ಖಾಸಗಿ ವಲಯವನ್ನು ಒಟ್ಟಿಗೆ ಸೇರಿಸಲು ಒಂದು ಅವಕಾಶವಾಗಿದ್ದು, ಹತ್ತು ವರ್ಷಗಳ ಸಂಘಟಿತ, ವೇಗವರ್ಧಕ ಮತ್ತು ಸಹಕಾರ ಕ್ರಮಗಳ ಜೀವನವನ್ನು ಸುಧಾರಿಸಲು ವಯಸ್ಸಾದ ಜನರು, ಅವರ ಕುಟುಂಬಗಳು ಮತ್ತು ಅವರು ವಾಸಿಸುವ ಸಮುದಾಯಗಳು ಇತರೆ. ಪ್ರಪಂಚದಾದ್ಯಂತ ಜನಸಂಖ್ಯೆಯು ಹಿಂದಿನ ಕಾಲಕ್ಕಿಂತ ವೇಗವಾಗಿ ಹಿರಿಯ ನಾಗರಿಕರು ಮತ್ತು ಜನಸಂಖ್ಯಾ ಪರಿವರ್ತನೆಯ ಸಮಾಜದ ಬಹುತೇಕ ಎಲ್ಲ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ.

ಹೀಗಾಗಿ ಈ ಬಾರಿಯ ಘೋಷಣೆಯು 'ವಯಸ್ಸು ಮತ್ತು ವಯಸ್ಸಾಗುವಿಕೆಯ ಸೂಕ್ತ ನಿರ್ವಹಣೆಯು ಸಾಂಕ್ರಾಮಿಕತೆಯ ತೀವ್ರತೆಯನ್ನು ಬದಲಾಯಿಸುವುದೇ' ಎಂದಾಗಿದೆ.

ಸಕ್ರಿಯ ಮತ್ತು ಆರೋಗ್ಯಕರ ವಯಸ್ಸಾದ ಪರಿಕಲ್ಪನೆಯೊಂದಿಗೆ ವಯೋವೃದ್ಧರಿಗೆ ಸುಲಭವಾಗಿ, ಉತ್ತಮ-ಗುಣಮಟ್ಟದ ದೀರ್ಘಾವಧಿ ಮತ್ತು ಮೀಸಲಾದ ಆರೈಕೆ ಸೇವೆಗಳನ್ನು ಒದಗಿಸುವುದಕ್ಕಾಗಿ ಆರೋಗ್ಯ ಇಲಾಖೆಯು ರಾಷ್ಟೀಯ ವಯೋವೃದ್ದರ ಆರೋಗ್ಯ ಆರೈಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹಿರಿಯ ನಾಗರಿಕರ ಆರೈಕೆಗಾಗಿ ವ್ಯವಸ್ಥೆಗಳು (ಹೊರರೋಗಿ ತಪಾಸಣೆ): ಹಿರಿಯ ನಾಗರಿಕರ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಪ್ರಯೋಗಾಲಯ, ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. 15 ಜಿಲ್ಲೆಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾದ ಭೌತಚಿಕಿತ್ಸೆಯ ಘಟಕಗಳು ಪ್ರತಿ ಜಿಲ್ಲೆಯ ಆಸ್ಪತ್ರೆಯಲ್ಲಿ ಸಲಕರಣೆಗಳು ಮತ್ತು ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ವತಿಯಿಂದ ನೀಡಲಾಗುತ್ತಿದೆ. ಇನ್ನು ಹಿರಿಯರ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆ ಮಟ್ಟದಲ್ಲಿ ಪ್ರತಿದಿನ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಶುಕ್ರವಾರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹಿರಿಯ ಆರೈಕೆಗಾಗಿ ತಜ್ಞರು ಸಮಾಲೋಚನೆಯೊಂದಿಗೆ ಆರೈಕೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಒಳರೋಗಿ ಸೇವೆಗಳ ಅಡಿಯಲ್ಲಿ ಉಚಿತ ಸಮಾಲೋಚನೆ ಮತ್ತು ಭೌತ ಚಿಕಿತ್ಸೆ ಅಡಿಯಲ್ಲಿ ನೀಡಲಾಗುತ್ತದೆ.

ಇನ್ನು ಹಿರಿಯರ ಆರೈಕೆ ದಿನದ ಆಚರಣೆ ಅಂಗವಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಸಂಸ್ಥೆಗಳು ಮತ್ತು ಕೋವಿಡ್ -19 ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿ ಗುಣಮುಖರಾದ ವಯೋವೃದ್ಧರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ.

ಆರೋಗ್ಯ ಇಲಾಖೆಯ ಮುಂದಿನ ಹಾದಿ ಏನು.?

1. ಸಮುದಾಯ ಮತ್ತು ಗೃಹ ಮಟ್ಟಕ್ಕೆ ಹಿರಿಯರ ಆರೈಕೆಯನ್ನು ವಿಸ್ತರಿಸುವುದು.

2. ಉಪಶಾಮಕ ಚಿಕಿತ್ಸೆ ಅಗತ್ಯವಿರುವವರು ಗೃಹ ಮಟ್ಟದಲ್ಲಿ ಸೌಲಭ್ಯ ಕಲ್ಪಿಸುವುದು.

3. ಅಸಾಂಕ್ರಾಮಿಕ ರೋಗ ಗಳಿರುವ ಹಿರಿಯರಿಗೆ ಉಚಿತವಾಗಿ ಔಷಧಿಗಳನ್ನು ನಿವಾಸಕ್ಕೆ ಸಮೀಪದ ಉಪಕೇಂದ್ರ/ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮಟ್ಟದಲ್ಲಿ ಲಭ್ಯವಾಗುವಂತೆ ಕ್ರಮ ವಹಿಸುವುದು

4. ವೃದ್ದರ ಸಕ್ರಿಯ ಭಾಗವಹಿಸುವಿಕೆಗಾಗಿ ಅವಕಾಶಗಳನ್ನು ಸೃಷ್ಟಿಸುವುದು

ABOUT THE AUTHOR

...view details