ಕರ್ನಾಟಕ

karnataka

ETV Bharat / bharat

ಸತ್ಯ ಹೇಳಿದ್ದಕ್ಕೆ ಅತ್ತೆಯನ್ನೇ ಗುಂಡಿಕ್ಕಿ ಕೊಂದ ಸೋದರಳಿಯ - ಗಂಧದ ಮರ ಸಾಗಾಟ

ಮೃತಪಟ್ಟ ಮಹಿಳೆಯ ಸೋದರಳಿಯ ಚಾಪ್ಲಿ ಗಂಧದ ಮರವನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಚಂದ್ರಿಕಾ ಬೇರೆಯವರಿಗೆ ತಿಳಿಸಿದ ಕಾರಣ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Woman shot dead in Marayoor by her nephew
ಇಡುಕ್ಕಿ: ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸೋದರಳಿಯ

By

Published : Aug 22, 2020, 11:33 AM IST

ಇಡುಕ್ಕಿ (ಕೇರಳ): ಇಲ್ಲಿನ ಮರಯೂರ್​ನಲ್ಲಿ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮರೂರು ಬಳಿಯ ಬುಡಕಟ್ಟು ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಪಾಲಪೆಟ್ಟಿಯ ಚಂದ್ರಿಕಾ (35) ಎಂದು ಗುರುತಿಸಲಾಗಿದೆ.

ಘಟನೆಯ ಸಂಬಂಧ ಚಂದ್ರಿಕಾಳ ಸೋದರಳಿಯ ಚಾಪ್ಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಪ್ಲಿ ಗಂಧದ ಮರವನ್ನು ಕಡಿದು ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಚಂದ್ರಿಕಾ ಬೇರೆಯವರಿಗೆ ತಿಳಿಸಿದ ಕಾರಣ ದ್ವೇಷದ ಕಾರಣಕ್ಕಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇನ್ನೂ ಆರೋಪಿ ಚಾಪ್ಲಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

...view details