ಕೋಲ್ಕತ್ತಾ: ಲಾಕ್ ಡೌನ್ ಉಲ್ಲಂಘಿಸಿ ತೆರಳುತ್ತಿದ್ದ ಕಾರೊಂದನ್ನು ತಡೆದ ಕಾರಣ ಯುವತಿಯೊಬ್ಬಳು ಟ್ರಾಫಿಕ್ ಪೊಲೀಸ್ ಪೇದೆಯ ಸಮವಸ್ತ್ರವನ್ನು ನೆಕ್ಕಿದ ವಿಚಿತ್ರ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಇಲ್ಲಿನ ಸಾಲ್ಟ್ಲೇಕ್ ಪ್ರದೇಶದ ಪಿಎನ್ಬಿ ಕ್ರಾಸಿಂಗ್ ಬಳಿ ಕಾರನ್ನು ತಡೆದ ಪೊಲೀಸ್ ಪೇದೆಯೊಬ್ಬರ ಸಮವಸ್ತ್ರವನ್ನು ಯುವತಿ ನೆಕ್ಕಿ ವಿಚಿತ್ರವಾಗಿ ವರ್ತಿಸಿದ್ದಾಳೆ. ಜೊತೆಗೆ ಅಲ್ಲಿದ್ದ ಪೊಲೀಸರನ್ನು ಅಸಭ್ಯವಾಗಿ ನಿಂದಿಸಿದ್ದಾಳೆ.
ಟ್ರಾಫಿಕ್ ಪೊಲೀಸ್ ಸಮವಸ್ತ್ರ ನೆಕ್ಕಿದ ಯುವತಿ: 'ವಿದ್ಯಾವಂತೆಯ' ನಡೆಗೆ ನೆಟ್ಟಿಗರಿಂದ ಭಾರಿ ಆಕ್ರೋಶ - ಪಶ್ಚಿಮಬ ಬಂಗಾಳದಲ್ಲಿ ಲಾಕ್ಡೌನ್
ಲಾಕ್ಡೌನ್ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಸಂಚಾರ ಪೊಲೀಸರ ಸಮವಸ್ತ್ರವನ್ನು ಯುವತಿಯೊಬ್ಬಳು ನೆಕ್ಕಿ ವಿಚಿತ್ರವಾಗಿ ವರ್ತಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಟ್ರಾಫಿಕ್ ಪೊಲೀಸ್ನ ಸಮವಸ್ತ್ರ ನೆಕ್ಕಿದ ಯುವತಿ
''ನನಗೆ ಆರೋಗ್ಯ ಸರಿಯಿಲ್ಲ. ನಾನು ಒಂಟಿಯಾಗಿ ಬದುಕುತ್ತಿದ್ದೇನೆ. ನಾನೀಗ ಮೆಡಿಕಲ್ ಶಾಪ್ಗೆ ಹೋಗಿಲ್ಲ ಅಂದ್ರೆ ಯಾರು ನನಗೆ ಔಷಧಿ ತಂದು ಕೊಡುತ್ತಾರೆ..?'' ಎಂದು ಪೊಲೀಸರನ್ನು ಪ್ರಶ್ನಿಸಿದ್ದಾಳೆ. ಕೆಲ ಸಮಯದ ನಂತರ ಪೊಲೀಸರು ಯುವತಿ, ಆಕೆಯ ಸ್ನೇಹಿತ ಹಾಗೂ ಕಾರಿನ ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ರಕ್ತದ ಕಲೆಯನ್ನು ಯುವತಿ ತನ್ನ ಸಮವಸ್ತ್ರಕ್ಕೆ ಒರೆಸಿದ್ದಾಳೆ ಎಂದು ಪೊಲೀಸರು ಆರೋಪ ಮಾಡಿದ್ದಾರೆ.