ಹೈದರಾಬಾದ್: ಅಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ಆತನ ಕೊಲೆ ಮಾಡಿ ಪೊಲೀಸರ ಮುಂದೆ ಹಾಜರಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಅಳಿಯನ ಕೊಲೆಗೈದು ಪೊಲೀಸರ ಮುಂದೆ ಹಾಜರಾದ ಮಹಿಳೆ!
ಮಗಳ ಗಂಡನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತಾಯಿ ಇದೀಗ ಆತನ ಕೊಲೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
2019ರಲ್ಲಿ ನವೀನ್ 19 ವರ್ಷದ ಯುವತಿ ವಂದನಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನು. ಆದರೆ ಕೆಲವೇ ದಿನಗಳಲ್ಲಿ ಯುವತಿಯ ತಾಯಿ ಜತೆ ಆತ ಅನೈತಿಕ ಸಂಪರ್ಕ ಸಾಧಿಸಿದ್ದಾನೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ವಂದನಾ ಇಬ್ಬರಿಗೂ ವಾರ್ನ್ ಮಾಡಿದ್ದಾಳೆ. ಆದರೆ ಅವರು ಮಾತು ಕೇಳದೇ ತಮ್ಮ ಹಳೇ ಚಾಳಿ ಮುಂದುವರೆಸಿದ್ದರಿಂದ ವಂದನಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದೇ ಪ್ರಕರಣದ ಮೇಲೆ ಅಳಿಯ ನವೀನ್ ಬಂಧನಕ್ಕೊಳಗಾಗಿದ್ದನು. ಕೆಲ ದಿನಗಳ ನಂತರ ಜಾಮೀನು ಪಡೆದು ಹೊರಬಂದಿದ್ದಾನೆ.
ನೇರವಾಗಿ ಅತ್ತಿಗೆ ಅನಿತಾ ಮನೆಗೆ ಬಂದಿರುವ ನವೀನ್ ಆಕೆಯ ಮೇಲೆ ವಾಗ್ದಾಳಿ ನಡೆಸಿ, ಕಿರುಕುಳ ನೀಡಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ಅತ್ತೆ, ನವೀನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ. ಜತೆಗೆ ಉಪ್ಪಾಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.