ಕರ್ನಾಟಕ

karnataka

ETV Bharat / bharat

ಗುರುದಾಸಪುರದಲ್ಲಿ ಆಗುತ್ತಾ 'ಸನ್ನಿ' ರೈಸ್​ ? ​

ಬಿಜೆಪಿ ಭದ್ರಕೋಟೆಯಾಗಿದ್ದ ಗುರುದಾಸಪುರ ಈಗ ಕಾಂಗ್ರೆಸ್ ವಶದಲ್ಲಿದೆ. ಇದೀಗ ಪುನಃ ಇದನ್ನು ತಮ್ಮ ತೆಕ್ಕೆಗೆ ಪಡೆಯುವ ನಿಟ್ಟಿನಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್​ ಅವರನ್ನು ಕಣಕ್ಕಿಳಿಸಿದೆ ಬಿಜೆಪಿ

ಚಿತ್ರಕೃಪೆ : ಟ್ವಿಟ್ಟರ್

By

Published : May 22, 2019, 4:20 PM IST

Updated : May 22, 2019, 4:57 PM IST

ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ಏಪ್ರಿಲ್​ನಂದು ಕಮಲ ಮುಡಿದಿದ್ದ ಸನ್ನಿ, ರಾಜಕೀಯದಲ್ಲಿ ನೆಲೆ ನಿಲ್ಲಲ್ಲು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಗುರುದಾಸ್​ಪುರ ಕ್ಷೇತ್ರದಲ್ಲಿ ಸ್ವತಂತ್ರ ಭಾರತದ ಮೊದಲ ಲೋಕಸಭೆ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಕಾಂಗ್ರೆಸ್​ ಪಕ್ಷ, 1971ರ ವರಗೆ ಇಲ್ಲಿ ಭದ್ರ ನೆಲೆ ಕಂಡುಕೊಂಡಿತ್ತು. ಆದರೆ, 1977 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರ ಕೈ ಜಾರಿತು. ಮೊಟ್ಟ ಮೊದಲ ಬಾರಿಗೆ ಜನತಾ ಪಾರ್ಟಿಯಿಂದ ಯಜ್ಞಾ ದತ್​ ಆರಿಸಿ ಬಂದಿದ್ದರು. ಇದೇ ಕೊನೆ ಮತ್ತೆ ಜನತಾ ಪಾರ್ಟಿ ಮತ್ತೆ​ ಗುರುದಾಸ್‌ಪುರನಲ್ಲಿ ಖಾತೆ ತೆರೆದಿಲ್ಲ. ನಂತರ ನಡೆದ 1980ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ವಾಪಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಳ್ಳಿ ಕಾಂಗ್ರೆಸ್ ಸಫಲವಾಗಿತ್ತು.

1980 ರಿಂದ 98 ರವರೆಗೆ ಕಾಂಗ್ರೆಸ್​ ಅಧಿಪತ್ಯದಲ್ಲಿದ್ದ ಈ ಕ್ಷೇತ್ರಕ್ಕೆ ಬಾಲಿವುಡ್ ನಟ ವಿನೋದ್​ ಖನ್ನಾ ಕನ್ನ ಹಾಕಿದ್ರು. ಕಮಲಕ್ಕೆ ಈ ಕ್ಷೇತ್ರದಲ್ಲಿ ಮೊದಲ ಗೆಲುವು ತಂದು ಕೊಟ್ಟ ಖನ್ನಾ,1998,99,2004 ರಲ್ಲಿ ಸತತ ಜಯ ಸಾಧಿಸಿ ಬಿಜೆಪಿ ಭದ್ರೆಕೋಟೆಯನ್ನಾಗಿಸಿದ್ರು. ಆದರೆ, ಇವರ ಗೆಲುವಿನ ನಾಗಾಲೋಟಕ್ಕೆ ಅಡ್ಡಗಾಲು ಹಾಕಿದ್ದು ಕಾಂಗ್ರೆಸ್​ನ ಪ್ರತಾಪ್ ಸಿಂಗ್ ಬಾಜ್ವಾ. ಇವರು 2009 ರಲ್ಲಿ ಗೆಲುವು ಪಡೆದು ಸೋಲಿಲ್ಲದ ಸರದಾರನಾಗಿದ್ದ ಖನ್ನಾಗೆ ಸೋಲಿನ ರುಚಿ ತೋರಿಸಿದ್ದರು.

ಇನ್ನು 2014ರ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಈ ಕ್ಷೇತ್ರದಲ್ಲಿ ಅರಳಿತು. ಪುನಃ ವಿನೋದ್ ಖನ್ನಾ ಅವರೇ ಇಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟರು. ಆದರೆ, 2017 ರಲ್ಲಿ ಇವರ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನ ಸುನಿಲ್ ಜಾಕರ್ ಇಲ್ಲಿ ಗೆಲುವು ಪಡೆದರು.

ಸದ್ಯ ಕಾಂಗ್ರೆಸ್ ವಶದಲ್ಲಿರುವ ಗುರುದಾಸ್​ಪುರವನ್ನು ಮರಳಿ ಪಡೆಯಲು ರಣತಂತ್ರ ಹೂಡಿರುವ ಕಮಲ ಪಡೆ, ಬಾಲಿವುಡ್ ನಟ ಸನ್ನಿ ಡಿಯೋಲ್ ಅವರನ್ನು ಕರೆತಂದಿದೆ. ಪಂಜಾಬ್‍ನಲ್ಲಿ ಬಿಜೆಪಿಯು ಶಿರೋಮಣಿ ಅಕಾಲಿ ದಳದ (ಎಸ್‍ಎಡಿ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೆ. ಕ್ಷೇತ್ರದ ತುಂಬೆಲ್ಲಾ ಸುತ್ತಾಡಿ ಭರ್ಜರಿ ಪ್ರಚಾರ ನಡೆಸಿರುವ ಸನ್ನಿ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಇನ್ನು ಒಟ್ಟು ಒಂಭತ್ತು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಈ ಗುರುದಾಸಪುರದಲ್ಲಿ ಸದ್ಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಎಂಎಲ್​ಎಗಳಿದ್ದಾರೆ. ತಲಾ ಒಂದೊಂದು ಶಿರೋಮಣಿ ಅಕಾಲಿ ದಳ ಹಾಗೂ ಬಿಜೆಪಿಯ ವಶದಲ್ಲಿದೆ. ಕಾಂಗ್ರೆಸ್​ನ ಹಾಲಿ ಎಂಪಿ ಸುನೀಲ್ ಜಕಾರ್ ಅವರೇ ಕಣದಲ್ಲಿದ್ದು, ಸನ್ನಿ ಡಿಯೋಲ್​​​ಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

Last Updated : May 22, 2019, 4:57 PM IST

ABOUT THE AUTHOR

...view details