ಜೈಪುರ:ಒಗ್ಗಟ್ಟಿನಿಂದ ಮಾತ್ರ ಜಯ ಗಳಿಸಿಸಲು ಸಾಧ್ಯವಿದೆ. ಹೀಗಾಗಿ ಆ.14 ಅಂದರೆ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಹೋಟೆಲ್ ಫೇರ್ಮಾಂಟ್ನಲ್ಲೇ ಇರುವಂತೆ ಶಾಸಕರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್, ಸರ್ಕಾರಕ್ಕೆ ಇರುವ ಕಂಟಕದಿಂದ ಪಾರಾಗುವವರೆಗೆ ಎಲ್ಲಾ ಶಾಸಕರು ಒಟ್ಟಿಗೆ ಇರಬೇಕು. ಅದು ಎಷ್ಟು ದಿನಗಳಾದರೂ ಆಗಬಹುದು. ಹೋಟೆಲ್ನಲ್ಲಿ ಕುಳಿತುಕೊಂಡೆ ನಿಮ್ಮ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಂತೆ ಶಾಸಕರಿಗೆ ಸೂಚಿಸಿದ್ದಾರೆ.