ನೋಯ್ಡಾ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭೇಟಿಗೆ ಭಾರತಕ್ಕೆ ಫೆ. 24 ರಂದು ಬರಲಿದ್ದಾರೆ. ಇದೇ ವೇಳೆ ಟ್ರಂಪ್ ಮತ್ತು ಅವರ ಪತ್ನಿ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಯಮುನಾ ನದಿಯನ್ನು ಶುದ್ಧವಾಗಿಸಲು ಓಖ್ಲಾ ಬ್ಯಾರೇಜ್ನಿಂದ ನೀರನ್ನು ಬಿಡಲಾಗಿದೆ.
ಫೆ. 24ಕ್ಕೆ ಟ್ರಂಪ್ ತಾಜ್ ಮಹಲ್ ಭೇಟಿ ಹಿನ್ನೆಲೆ: ಯಮುನಾ ಸ್ವಚ್ಛತೆಗೆ ಗಂಗಾ ಜಲ - ಓಖ್ಲಾ ಬ್ಯಾರೇಜ್ನಿಂದ ನೀರು
ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭೇಟಿಗೆ ಭಾರತಕ್ಕೆ ಫೆ. 24 ರಂದು ಬರಲಿದ್ದಾರೆ. ಇದೇ ವೇಳೆ ಅವರು ತಾಜ್ ಮಹಲ್ನನ್ನು ವೀಕ್ಷಿಸಲಿದ್ದಾರೆ. ಹಾಗಾಗಿ ಯಮುನಾ ನದಿಯನ್ನು ಶುದ್ಧವಾಗಿಸಲು ಓಖ್ಲಾ ಬ್ಯಾರೇಜ್ನಿಂದ ನೀರನ್ನು ಬಿಡಲಾಗಿದೆ.
ಯಮುನಾ ನದಿಯನ್ನು ಶುದ್ಧವಾಗಿಸಲು ಹರಿದ್ವಾರದಿಂದ 500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದು ಬುಲಂದ್‌ಶಹರ್ ಮೂಲಕ 4 ದಿನಗಳ ನಂತರ ಆಗ್ರಾ ತಲುಪಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಂಡತಿಯೊಂದಿಗೆ ತಾಜ್‌ಗೆ ತೆರಳಲಿದ್ದಾರೆ. ಈ ಸಮಯದಲ್ಲಿ, ಅವರು ಯಮುನಾ ದಡದಲ್ಲಿ ನಿರ್ಮಿಸಲಾದ ತಾಜ್ ಮಹಲ್ನನ್ನು ನೋಡಲಿದ್ದಾರೆ. ಹಾಗಾಗಿ ಯಮುನಾ ತೀರವೂ ಸ್ವಚ್ಛವಾಗಿ ಕಾಣಲೆಂದು ಗಂಗಾಜಲವನ್ನು ಬಿಡಲಾಗಿದೆ.
ಮಾಹಿತಿ ಪ್ರಕಾರ, ಸುಮಾರು 500 ಕ್ಯೂಸೆಕ್ ಗಂಗಾ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ನೀರು ಫೆ.21 ರ ಮಧ್ಯಾಹ್ನ ಆಗ್ರಾಕ್ಕೆ ಬರಲಿದೆ. ಫೆಬ್ರವರಿ 24 ರವರೆಗೆ ಯಮುನಾದಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿದೆ.