ಹೈದರಾಬಾದ್ :ಲಾಕ್‌ಡೌನ್ ಮಾನದಂಡಗಳು ಸಡಿಲಗೊಂಡ ಬೆನ್ನಲ್ಲೇ ಮತ್ತು ದೇಶಾದ್ಯಂತ ವೈನ್ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದ ತಕ್ಷಣ, ರಾಜ್ಯದ ವೈನ್ ಶಾಪ್‌ಗಳ ಎದುರು ಜಾತ್ರೋಪಾದಿಯಲ್ಲಿ ಜನರ ಉದ್ದನೆಯ ಸಾಲುಗಳೇ ಕಾಣುತ್ತಿದ್ದವು.
ಜೊತೆಗೆ ಜನದಟ್ಟಣೆಯನ್ನು ನಿಯಂತ್ರಿಸಲು ವೈನ್ ಮಳಿಗೆಗಳ ಎದುರು ಪೊಲೀಸರು ಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಯಿತು. ಕೋವಿಡ್-19 ದೇಶದಾದ್ಯಂತ ಹಬ್ಬುತ್ತಿರುವ ಹೊತ್ತಿನಲ್ಲಿ ಜನರು ಮದ್ಯ ಸೇವನೆ ಮಾಡುವುದಕ್ಕೆ ವೈದ್ಯಕೀಯ ಲೋಕ ಅನುಮತಿ ನೀಡುವುದಿಲ್ಲ. ವಿಶ್ವಆರೋಗ್ಯ ಸಂಸ್ಥೆ ಪ್ರಕಾರ ಮದ್ಯಪಾನ ಮಾಡುವುದು ಕೋವಿಡ್-19ಗೆ ವಿರೋಧ. ಮದ್ಯ ಸೇವೆನೆಯಿಂದಾಗಿ ಕರೋನಾ ವೈರಸ್ ಸುಲಭವಾಗಿ ದೇಹವನ್ನು ಪ್ರವೇಶಿಸುತ್ತದೆ ಮತ್ತು ಹರಡುತ್ತದೆ ಎಂದು WHO ಮುನ್ನೆಚ್ಚರಿಕೆ ನೀಡಿದೆ.
ಮದ್ಯಪಾನ ಮಾಡುವ ವ್ಯಕ್ತಿಯು, ಅವನ ವರ್ತನೆಯಿಂದಾಗಿ ವೈರಸ್‌ನ ಸಮಾಜದಲ್ಲಿ ಸುಲಭವಾಗಿ ಹರಡಲು ಕಾರಣವಾಗಬಹುದು ಎಂದು ಡಬ್ಲ್ಯುಹೆಚ್‌ಒ ಬಹಿರಂಗಪಡಿಸಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯವನ್ನು ಸೇವಿಸುವುದರಿಂದ ಮಾನವರಲ್ಲಿ ನ್ಯುಮೋನಿಯಾ ಉಂಟಾಗುವ ಅಪಾಯಕ್ಕೆ ಕಾರಣವಾಗುತ್ತದೆ. ಯಾಕಂದರೆ, ಅದು ಪ್ರತಿರೋಧಕತೆಯನ್ನು ಕಡಿಮೆ ಮಾಡುತ್ತದೆ. 2015ರಲ್ಲಿ ನಡೆಸಿದ ಅಧ್ಯಯನವು ಇದನ್ನು ಬಹಿರಂಗಪಡಿಸಿತು ಮತ್ತು ಅದನ್ನು 'ಜರ್ನಲ್ ಆಲ್ಕೋಹಾಲ್ ರೀಸರ್ಚ್'ನಲ್ಲಿ ಪ್ರಕಟಿಸಲಾಗಿದೆ.