ಕರ್ನಾಟಕ

karnataka

ETV Bharat / bharat

ದ್ವಿಶತಕ ಸ್ಟಾರ್​​​ ಮಯಾಂಕ್​ ಯಶಸ್ಸಿನ ಹಿಂದೆ ದಾವಣಗೆರೆ ಹುಡುಗನ ಕೈವಾಡ​​: ಉತ್ತಪ್ಪ ಹೇಳಿದ್ರು ಈ ಸಿಕ್ರೇಟ್​!

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಯಾಂಕ್​ ಅಗರವಾಲ್​ ಅದ್ಭುತ ಪ್ರದರ್ಶನ ನೀಡಿದ್ದು, ಇದರ ಹಿಂದೆ ಕರ್ನಾಟಕ ರಣಜಿ ತಂಡದ ಮಾಜಿ ಕ್ಯಾಪ್ಟನ್​ ಕೈವಾಡವಿದೆ ಎಂದು ರಾಬಿನ್​ ಉತ್ತಪ್ಪ ತಿಳಿಸಿದ್ದಾರೆ.

ಮಯಾಂಕ್​ ಅಗರವಾಲ್​

By

Published : Oct 4, 2019, 2:06 PM IST

Updated : Oct 4, 2019, 3:48 PM IST

ವಿಶಾಖಪಟ್ಟಣಂ:ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆರಂಭಿಕ ಆಟಗಾರ,ಕನ್ನಡಿಗ ಮಯಾಂಕ್​ ಅಗರವಾಲ್​ ಅಬ್ಬರದ ದ್ವಿಶತಕ ಸಿಡಿಸಿದ್ದು, ತಮ್ಮಲ್ಲಿರುವ ಸಾಮರ್ಥ್ಯ ಹೊರಹಾಕಿದ್ದಾರೆ.

ಕರ್ನಾಟಕ ರಣಜಿ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಪ್ಲೇಯರ್​ಗೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಆಯ್ಕೆ ಸಮಿತಿ ಮಣೆ ಹಾಕಿತ್ತು. ಅದಾದ ಬಳಿಕ ತಮಗೆ ಸಿಕ್ಕ ಅವಕಾಶವನ್ನ ಅದ್ಭುತವಾಗಿ ಬಳಿಸಿಕೊಂಡಿರುವ ಮಯಾಂಕ್​ ಬಗ್ಗೆ ಮತ್ತೋರ್ವ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಮಾತನಾಡಿದ್ದಾರೆ.

ರಾಬಿನ್​ ಉತ್ತಪ್ಪ

2017ರಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದ್ದ ಮಯಾಂಕ್​ ಅಗರವಾಲ್​, ಖುದ್ದಾಗಿ ಈ ವೇಳೆ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಪ್ರಮೊಷನ್​ ಪ್ರೋಮೋದಿಂದ ಸಹ ಮಯಾಂಕ್​ ಹೊರಗುಳಿದಿದ್ದರು. ಆದರೆ, ಕರ್ನಾಟಕ ರಣಜಿ ತಂಡದ ಕ್ಯಾಪ್ಟನ್​ ಆಗಿದ್ದ ವಿನಯ್​ ಕುಮಾರ್​​ ಪ್ರೇರಣೆ ಮಾಡಿ, ಉತ್ತಮ ರನ್​ಗಳಿಕೆ ಮಾಡುವಂತೆ ಹೇಳಿದ್ದರು. ಇದಾದ ನಂತರ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲೇ ಮಯಾಂಕ್​ ತ್ರಿಶತಕ(304) ಸಿಡಿಸಿದ್ರು. ತದನಂತರ ಮಯಾಂಕ್​ ತಿರುಗಿ ನೋಡದೇ ಓರ್ವ ಅದ್ಭುತ ಬ್ಯಾಟ್ಸಮನ್​ ಆಗಿ ಹೊರಹೊಮ್ಮಿದ್ದಾರೆ ಎಂದು ಉತ್ತಪ್ಪ ತಿಳಿಸಿದ್ರು. ದಾವಣಗೆರೆ ಎಕ್ಸ್​ಪ್ರೆಸ್​ ಎಂದೇ ಖ್ಯಾತಿ ಪಡೆದಿರುವ ವಿನಯ್​ ಕುಮಾರ್​ ತಮ್ಮ ಪ್ರೇರಣಾತ್ಮಕ ಮಾತುಗಳಿಂದಲೇ ಮಯಾಂಕ್​ಗೆ ಕ್ರಿಕೆಟ್​​ನಲ್ಲಿ ಕಮ್​ಬ್ಯಾಕ್​ ಆಗಲು ಕಾರಣವಾಗಿದ್ದು, ಅವರ ಸದ್ಯದ ಸ್ಥಿತಿಗೆ ಆ ವ್ಯಕ್ತಿ ಕಾರಣ ಎಂದು ತಿಳಿಸಿದ್ದಾರೆ.

ವಿನಯ್​ ಕುಮಾರ್​​​

ಕರ್ನಾಟಕ ರಣಜಿ ತಂಡದಲ್ಲಿ ಮಯಾಂಕ್​ ಮೇಲಿಂದ ಮೇಲೆ ಅವಕಾಶ ಪಡೆದುಕೊಂಡು ಓರ್ವ ಅದ್ಭುತ ಬ್ಯಾಟ್ಸಮನ್​ ಆಗಿ ರೂಪಗೊಳ್ಳುವಲ್ಲಿ ವಿನಯ್​ ಕುಮಾರ್​ ಪಾತ್ರ ತುಂಬಾ ಮಹತ್ವದಾಗಿದೆ. ಸದ್ಯದ ಮಯಾಂಕ್​ ಉತ್ತಮ ಪ್ರದರ್ಶನಕ್ಕೆ ವಿನಯ್​ ಕಾರಣ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

Last Updated : Oct 4, 2019, 3:48 PM IST

ABOUT THE AUTHOR

...view details