ಕರ್ನಾಟಕ

karnataka

ETV Bharat / bharat

ತಮಗೆ ತಾವೇ ಗುಂಡಿಟ್ಟು ಆತ್ಮಹತ್ಯೆಗೆ ಶರಣಾದ ಡಿಸಿಪಿ...ಯಾವ ಕಾರಣಕ್ಕೆ ಈ ಸಾವು? - ಹರಿಯಾಣದ ಫರೀದಾಬಾದ್​ನಲ್ಲಿ ಆತ್ಮಹತ್ಯೆ

ಹರಿಯಾಣದ ಫರೀದಾಬಾದ್​ನ ಡಿಸಿಪಿ ವಿಕ್ರಮ್ ಕಪೂರ್ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಡಿಸಿಪಿ ವಿಕ್ರಮ್​ ಕಪೂರ್

By

Published : Aug 14, 2019, 1:07 PM IST

ಫರೀದಾಬಾದ್: ಇಲ್ಲಿನ ಡಿಸಿಪಿ ವಿಕ್ರಮ್​ ಕಪೂರ್​(59) ತಮ್ಮ ನಿವಾಸದಲ್ಲಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಸರ್ವಿಸ್​ ರಿವಲ್ವಾರ್​​​​ನಿಂದ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾರೆ.

ವಿಕ್ರಮ್​ ಕಪೂರ್​ ಪತ್ನಿ ಜೊತೆ ಫರೀದಾಬಾದ್​ನ ಪೊಲೀಸ್​ ಲೈನ್ಸ್​​ನ, ಸೆಕ್ಟರ್​ 30ರಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಅವರನ್ನ ಎನ್​ಐಟಿ ಫರೀದಾಬಾದ್​​ ಡಿಸಿಪಿಯಾಗಿ ನಿಯುಕ್ತಿಗೊಳಿಸಲಾಗಿತ್ತು. 2020ರಲ್ಲಿ ಅವರು ಸೇವಾ ಅವಧಿ ಕೊನೆಗೊಳ್ಳಲಿತ್ತು. 2017ರಲ್ಲಿ ಹರಿಯಾಣ ಸರ್ಕಾರ ಇವರನ್ನ ಐಪಿಎಸ್​​ಗೆ ಬಡ್ತಿ ನೀಡಿತ್ತು.

ಡಿಸಿಪಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕ ನವದೀಪ್​ ಸಿಂಗ್​​ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ABOUT THE AUTHOR

...view details