ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ): ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ಎರಡು ಪ್ರಯಾಣಿಕ ವಾಹನಗಳು ರಜ್ದಾನ್ ಮೇಲ್ಭಾಗದಲ್ಲಿ ಹಿಮದಲ್ಲಿ ಸಿಲುಕಿಕೊಂಡಿದ್ದು, ಭಾರತೀಯ ಸೇನೆ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಶನಿವಾರ ಬಂಡಿಪೋರಾದಿಂದ ಗುರೆಜ್‌ಗೆ ಹೋಗುವಾಗ ರಜ್ದಾನ್ ಮೇಲ್ಭಾಗದಲ್ಲಿ ಎರಡು ಪ್ರಯಾಣಿಕ ವಾಹನಗಳು ಹಿಮದಲ್ಲಿ ಸಿಲುಕಿದ್ದವು. ಬಳಿಕ ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸೇನೆ ನಿನ್ನೆಯೇ ಸುರಕ್ಷಿತವಾಗಿ ಸ್ಥಳಾಂತರಿಸಿತ್ತು. ಇಂದು ಹಿಮದಲ್ಲಿ ಸಿಕ್ಕಿಬಿದ್ದ ವಾಹನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.