ಉತ್ತರಕಾಶಿ|(ಉತ್ತರಾಖಂಡ): ಹೆತ್ತವರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಭಾಗಿಯಾಗಲು ಆಗಮಿಸಿದ್ದ ಮಗಳ ಮೇಲೆ ಪಾಪಿ ತಂದೆಯೊಬ್ಬ ಅತ್ಯಾಚಾರ ಎಸೆಗಿದ್ದು, ಇದರಿಂದ ರೋಸಿ ಹೋದ ಮಹಿಳೆ ಆತನ ಕೊಲೆ ಮಾಡಿರುವ ಘಟನೆ ನಡೆದಿದೆ.
ಸಮಾರಂಭಕ್ಕಾಗಿ ಮನೆಗೆ ಬಂದ ಮಗಳ ಮೇಲೆ ಅತ್ಯಾಚಾರ... ಪಾಪಿ ತಂದೆಯ ಕೊಲೆ ಮಾಡಿದ ಮಗಳು! - ಮಗಳು
ಸಮಾರಂಭಕ್ಕಾಗಿ ಗಂಡನ ಮನೆಯಿಂದ ತವರು ಮನೆಗೆ ಆಗಮಿಸಿದ್ದ ಹೆತ್ತ ಮಗಳ ಮೇಲೆ ಪಾಪಿ ತಂದೆ ಕ್ರೂರ ಕೃತ್ಯವೆಸಗಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಉತ್ತರಾಖಂಡನ್ ಉತ್ತರಕಾಶಿ ಜಿಲ್ಲೆಯ ಬಾಡ್ಕೊಟ್ ಏರಿಯಾದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. 51 ವರ್ಷದ ಪಾಪಿ ತಂದೆ ಮದುವೆ ಮಾಡಿಕೊಟ್ಟಿದ್ದ 26 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಕೊಡಲಿಯಿಂದ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಮಾರಂಭ ಮುಗಿಸಿ ರೂಂನಲ್ಲಿ ಮಗಳು ಮಲಗಿದ್ದಾಗ ಆಕೆಯ ಮೇಲೆ ಪಾಪಿ ತಂದೆ ಅತ್ಯಾಚಾರ ಎಸೆಗಿದ್ದಾನೆ. ಈ ವೇಳೆ ಆಕೆ ಪ್ರತಿಭಟಿಸಿದರೂ ಆತ ಕೇಳಿಲ್ಲ. ಹೀಗಾಗಿ ಕೊಡಲಿಯಿಂದ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾಳೆ. ಬೇರೆ ಸದಸ್ಯರು ಬಂದು ಕೇಳಿದಾಗ ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾಳೆ. ಇದಾದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಆಕೆಯನ್ನ ಬಂಧಿಸಿದ್ದು,ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ಡಿಎಸ್ ಕೊಹ್ಲಿ ತಿಳಿಸಿದ್ದಾರೆ.