ಕರ್ನಾಟಕ

karnataka

ETV Bharat / bharat

ಯೋಗಾಸನದ ಬಗ್ಗೆ ಮೋದಿ ಪಾಠ.. ಉಷ್ಟ್ರಾಸನದ ವಿಡಿಯೋ ಟ್ವೀಟ್​ ಮಾಡಿದ ನಮೋ..

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನರೇಂದ್ರ ಮೋದಿ ಯೋಗಾಸನಗಳ ಬಗ್ಗೆ ಹಲವಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ 6ನೇ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಉಷ್ಟ್ರಾಸನದ ಬಗ್ಗೆ ಮಾಹಿತಿ ನೀಡಿರುವ ವಿಡಿಯೋ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅನಿಮೇಟೆಡ್​ ವಿಡಿಯೋ

By

Published : Jun 10, 2019, 11:48 AM IST

ನವದೆಹಲಿ:ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನರೇಂದ್ರ ಮೋದಿ ಹಲವಾರು ಯೋಗಾಸನಗಳ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ 6ನೇ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಉಷ್ಟ್ರಾಸನದ ಬಗ್ಗೆ ಮಾಹಿತಿ ನೀಡಿರುವ ವಿಡಿಯೋ ಇದಾಗಿದೆ.

ಉಷ್ಟ್ರಾಸನವನ್ನು ಪ್ರತಿ ದಿನ ಮಾಡುವುದರಿಂದ ಬೆನ್ನಿಗೆ ಹಾಗೂ ಭುಜಗಳಿಗ ಸಹಾಯವಾಗುತ್ತೆ ಎಂದು ನರೇಂದ್ರ ಮೋದಿ ತಮ್ಮ ಟ್ವಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಅನಿಮೇಷನ್​ ಆಧಾರಿತವಾಗಿದ್ದು, ಯೋಗ ಭಂಗಿಗಳ ಬಗ್ಗೆ ಮಾಹಿತಿ ನೀಡಿವ ವಿಡಿಯೋ ಇದಾಗಿದೆ. ಬೆಳಗ್ಗೆ 8.46ರಲ್ಲಿ ಉಷ್ಟ್ರಾಸನದ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಸದ್ಯ ವಿಡಿಯೋವನ್ನು 20 ಸಾವಿರ ಮಂದಿ ನೋಡಿದ್ದಾರೆ. 6 ಸಾವಿರ ಮಂದಿ ಲೈಕ್​ ಮಾಡಿದ್ದು, 1200 ಬಾರಿ ಈ ವಿಡಿಯೋ ರೀಟ್ವೀಟ್​ ಆಗಿದೆ. ಕಳೆದ ಬಾರಿ ಕೂಡ ಪ್ರಧಾನಿ ನರೇಂದ್ರ ಮೋದಿ ಯೋಗ ದಿನಗ ಅಂಗವಾಗಿ ಯೋಗಾಸನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದರು.

ABOUT THE AUTHOR

...view details