ಕರ್ನಾಟಕ

karnataka

ETV Bharat / bharat

ಮರೀಚಿಕೆಯಾದ ಸೇತುವೆ, ನದಿ ದಾಟಲು ​ಬ್ಯಾರೆಲ್​ ಬಳಕೆ... ಇದು ಗ್ರಾಮೀಣ ಭಾಗದ ದುಃಸ್ಥಿತಿ..! - Damdam

ಈ ಗ್ರಾಮದಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಕೃಷಿ ಭೂಮಿಗೆ ಹೋಗಬೇಕಾದರೆ ನದಿ ದಾಟಬೇಕಾದ ಅನಿವಾರ್ಯತೆ ಇದೆ. ಆದರೆ, ಸಮರ್ಪಕ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ.

ಪ್ಲಾಸ್ಟಿಕ್​ ಬ್ಯಾರೆಲ್

By

Published : Jul 25, 2019, 12:13 PM IST

ಮಂಡಸೌರ್​​​​ (ಮಧ್ಯ ಪ್ರದೇಶ):ದೇಶಕ್ಕೆ ಸ್ವಾತಂತ್ರ್ಯ ಬಂದು ಸುಮಾರು ಏಳು ದಶಕಗಳೇ ಆಗಿದ್ದರೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ಸರ್ಕಾರ ಹಿಂದುಳಿದಿದೆ. ಇದಕ್ಕೆ ಉತ್ತಮ ಉದಾಹರಣೆ ಮಧ್ಯ ಪ್ರದೇಶದ ಮಂಡಸೌರ್​ ಜಿಲ್ಲೆಯ ದಮ್​ದಮ್​ ಗ್ರಾಮ.

ದಮ್​ದಮ್​ ಗ್ರಾಮಸ್ಥರು ಕಳೆದ 70 ವರ್ಷಗಳಿಂದ ಸೇತುವೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಗ್ರಾಮದಲ್ಲಿ ವಾಸಿಸುವ ಹೆಚ್ಚಿನ ಜನರು ತಮ್ಮ ಕೃಷಿ ಭೂಮಿಗೆ ಹೋಗಬೇಕಾದರೆ ನದಿಯನ್ನು ದಾಟಬೇಕಾದ ಅನಿವಾರ್ಯತೆ ಇದ್ದು, ಆದರೆ ಸಮರ್ಪಕ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ.

ಇಲ್ಲಿನ ನಿವಾಸಿಗಳು ಪ್ಲಾಸ್ಟಿಕ್ ಬ್ಯಾರಲ್​ನಿಂದ ಬೋಟ್​ಗಳನ್ನು ನಿರ್ಮಿಸಿಕೊಂಡು ಆ ಮೂಲಕ ನಿತ್ಯ ನದಿ ದಾಟುತ್ತಾರೆ. ಕಾಲ್ನಡಿಗೆಯಲ್ಲಿ17 ಕಿ.ಮೀ ಸವೆಸಬೇಕಿದ್ದು ಅದೇ ನದಿ ಮೂಲಕವಾದರೆ ಕೇವಲ 2 ಕಿ.ಮೀ ಪ್ರಯಾಣಿಸಿದರೆ ಕೃಷಿಭೂಮಿ ತಲುಪುತ್ತಾರೆ.

ನಿತ್ಯ ಕನಿಷ್ಠ 500ರಿಂದ 600 ಮಂದಿ ಈ ನದಿ ದಾಟುತ್ತಾರೆ. ಮಳೆಗಾಲದಲ್ಲಂತೂ ಇಲ್ಲಿನ ಗ್ರಾಮಸ್ಥರ ಪಾಡು ಹೇಳತೀರದು. ರಾಜಕಾರಣಿಗಳಿಗೆ ಮನವಿ ನೀಡಿದರೆ ಸೇತುವೆ ನಿರ್ಮಿಸುವುದಾಗಿ ಆಶ್ವಾಸನೆ ನೀಡುತ್ತಾರೆ. ಆದರೆ, ಕಾರ್ಯಗತವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ABOUT THE AUTHOR

...view details