ಮುಜಾಫರ್ನಗರ(ಯುಪಿ):ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಕಳೆದ 10 ವರ್ಷಗಳ ಹಿಂದೆ ಮಹಿಳೆಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಇಲ್ಲಿನ ಸ್ಥಳೀಯ ಕೋರ್ಟ್ ಇದೀಗ ಶಿಕ್ಷೆ ಪ್ರಕಟಿಸಿದೆ.
10 ವರ್ಷದ ಹಿಂದೆ ಮಹಿಳೆಯೋರ್ವಳಿಗೆ ಕಿರುಕುಳ: ವ್ಯಕ್ತಿಗೆ ಈ ರೀತಿ ಶಿಕ್ಷೆ ನೀಡಿದ ಕೋರ್ಟ್! - ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿ
ಕಳೆದ 10 ವರ್ಷಗಳ ಹಿಂದೆ ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಇದೀಗ ಸ್ಥಳೀಯ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
uttar pradesh
2010ರ ಆಗಸ್ಟ್ 26ರಲ್ಲಿ ಪುನಿತ್ ಕುಮಾರ್ ಎಂಬ ವ್ಯಕ್ತಿ ಮಹಿಳೆಯೋರ್ವಳಿಗೆ ಬದ್ದೌನ್ ಪ್ರದೇಶದಲ್ಲಿ ಕಿರುಕುಳ ನೀಡಿದ್ದನು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ಅದೇ ವೇಳೆ ಆತನ ಬಂಧನ ಮಾಡಲಾಗಿತ್ತು. ಇದೀಗ ಕೋರ್ಟ್ ಸ್ಥಳೀಯ ಕೋರ್ಟ್ ತೀರ್ಪು ಹೊರಹಾಕಿದ್ದು, ಆತನಿಗೆ 13 ದಿನಗಳ ಜೈಲು ಶಿಕ್ಷೆ ಜತೆಗೆ 1,500 ರೂ ದಂಡ ವಿಧಿಸಿದೆ.
ವ್ಯಕ್ತಿ ವಿರುದ್ಧ ಸೆಕ್ಷನ್ 297(ಕ್ರಿಮಿನಲ್ ಕೃತ್ಯ) ಹಾಗೂ 294( ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ) ಅಡಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು.