ಕರ್ನಾಟಕ

karnataka

ETV Bharat / bharat

"ಅನ್​​ಲಾಕ್​​ -1: ಹ್ಯಾಂಡಲ್ ವಿಥ್ ಕೇರ್" ಎಂಬ ಶೀರ್ಷಿಕೆಯಡಿ ಉಪರಾಷ್ಟ್ರಪತಿ ಬರಹ

"ಅನ್​ಲಾಕ್ -1: ಹ್ಯಾಂಡಲ್ ವಿಥ್ ಕೇರ್" ಎಂಬ ಶೀರ್ಷಿಕೆಯಡಿ ಫೇಸ್​​ಬುಕ್​​ ಪೋಸ್ಟ್​​ನಲ್ಲಿ, ಈ ಸೋಂಕಿನ ವಿರುದ್ಧ ಹೋರಾಡಲೂ ಎಲ್ಲ ಮಧ್ಯಸ್ಥಗಾರರು (ಜನರು) ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬರೆದುಕೊಂಡಿದ್ದಾರೆ.

By

Published : Jun 1, 2020, 12:42 AM IST

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು "ಅನ್​​ಲಾಕ್​​ -1: ಹ್ಯಾಂಡಲ್ ವಿಥ್ ಕೇರ್" ಎಂಬ ಶೀರ್ಷಿಕೆಯಡಿ ಬರಹವನ್ನು ಫೇಸ್‌ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ಜನರು ಪರಿಸ್ಥಿತಿಯನ್ನು ತುಂಬಾ ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಬರೆದಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಜೂನ್ 8 ರಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್​ನನ್ನು ಮತ್ತಷ್ಟು ಸಡಿಲಗೊಳಿಸಲಿದೆ. ಈ ಕೊರೊನಾ ಎಂಬ ಮಹಾಮಾರಿಯಿಂದ ಉಂಟಾಗುವ ಸಮಸ್ಯೆಗಳನ್ನು ದೇಶವೂ ಹಿಮ್ಮೆಟ್ಟಿಸಬೇಕೆಂದರೇ, ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚಿಸಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

"ಅನ್​ಲಾಕ್ -1: ಹ್ಯಾಂಡಲ್ ವಿಥ್ ಕೇರ್" ಎಂಬ ಶೀರ್ಷಿಕೆಯ ಫೇಸ್​​ಬುಕ್​​ ಪೋಸ್ಟ್​​ನಲ್ಲಿ, ಈ ಸೋಂಕಿನ ವಿರುದ್ಧ ಹೋರಾಡಲೂ ಎಲ್ಲಾ ಮಧ್ಯಸ್ಥಗಾರರು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ.

ಲಾಕ್​ಡೌನ್​ 4.0 ದಲ್ಲಿ ಹಲವು ನಿಷೇಧಿತ ಕಾರ್ಯಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಇದರ ಪರಿಣಾಮ ಮೇ. 18 ರಿಂದ ಪ್ರತಿದಿನ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮೇ. 30 ರಂದು ಅನ್​ಲಾಕ್​-1 ಘೋಷಣೆಯಾದ್ದರಿಂದ ಸುಮಾರು 8.000 ದಷ್ಟು ಪ್ರಕರಣಗಳು ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ.

ಇದು ಏನನ್ನು ಸೂಚಿಸುತ್ತದೆ ಎಂದರೇ ನಿರ್ಬಂಧಗಳನ್ನು ಸಡಿಲಗೊಳಿಸಿದಷ್ಟು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗಾಗಿ ಅನ್​ಲಾಕ್​-1ನನ್ನು ನಾವೆಲ್ಲ ಎಚ್ಚರಿಕೆಯಿಂದ ನಿರ್ವಹಿಸಬೇಕು. ನಾವು ಎಚ್ಚರಿಕೆಯಿಂದ ಇದ್ದರೇ ಕೊರೊನಾ ಸೋಂಕಿನಿಂದ ದೂರವಿರಬಹುದೆಂಬುದು ಅವರ ಅಭಿಪ್ರಾಯವಾಗಿದೆ.

ಈ ಲಾಕ್‌ಡೌನ್ 1 ನಲ್ಲಿ ಸುಮಾರು ಏಳು ಲಕ್ಷ ಹಳ್ಳಿಗಳಲ್ಲಿ ವಾಸಿಸುವ 130 ಕೋಟಿ ಜನರು, 4,500 ಕ್ಕೂ ಹೆಚ್ಚು ಪಟ್ಟಣ, ನಗರಗಳು ಮತ್ತು ಮೆಗಾ ನಗರಗಳು ಕಂಟೇನ್​ಮೆಂಟ್​ ಪ್ರದೇಶಗಳಿಂದ ಹೊರಬಂದಿವೆ. ಕಂಟೇನ್​ಮೆಂಟ್​​ ವಲಯಗಳು ದೇಶದಾದ್ಯಂತ ಸುಮಾರು 6,000 ಇದ್ದು, ಇದರಲ್ಲಿ ಹೆಚ್ಚಾಗಿ 13 ನಗರಗಳಿವೆ ಎಂದು ತಿಳಿದುಬಂದಿದೆ. ಇದರಲ್ಲಿ ಆರು ರಾಜಧಾನಿಗಳಲ್ಲಿ ಶೇ.70ರಷ್ಟು ಸೋಂಕಿತರಿದ್ದಾರೆ.

ನಾಳೆಯಿಂದ ಪ್ರಾರಂಭವಾಗುವ ಒಂದು ತಿಂಗಳ ಅವಧಿಯ ಲಾಕ್‌ಡೌನ್ ಸಮಯದಲ್ಲಿ ನಿರ್ಬಂಧಗಳಿಗೆ ಒಳಪಡುವ ಜನರ ಸಂಖ್ಯೆ ಬಹಳ ಕಡಿಮೆ ಇರುತ್ತದೆ. ಕೇಂದ್ರದೊಂದಿಗೆ ಸಾಮರಸ್ಯದಿಂದ ವೈರಸ್ ವಿರುದ್ಧ ಹೋರಾಡುವಲ್ಲಿ ರಾಜ್ಯಗಳು ಇದುವರೆಗೆ ಶ್ಲಾಘನೀಯ ಪಾತ್ರ ವಹಿಸಿವೆ ಎಂದು ನಾಯ್ಡು ಹೇಳಿದರು. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅನ್ಲಾಕ್ -1 ನನ್ನು ನಿರ್ವಹಿಸುವಲ್ಲಿ ಈಗ ಇನ್ನೂ ದೊಡ್ಡ ಪಾತ್ರವನ್ನು ವಹಿಸಬೇಕಾಗಿದೆ. ಯಶಸ್ಸು ನಮ್ಮದಾಗಲಿ ಎಂದು ವೆಂಕಯ್ಯ ನಾಯ್ಡು ಅವರು ಆಶಿಸಿದರು.

ABOUT THE AUTHOR

...view details