ಕರ್ನಾಟಕ

karnataka

By

Published : Nov 11, 2019, 2:18 PM IST

Updated : Nov 11, 2019, 4:40 PM IST

ETV Bharat / bharat

ಕೇಂದ್ರದಲ್ಲಿ ಎನ್​​ಡಿಎ - ಶಿವಸೇನೆ ಮೈತ್ರಿ ಅಂತ್ಯ... ಕೇಂದ್ರ ಸಚಿವ ಸ್ಥಾನಕ್ಕೆ ಸಾವಂತ್​ ರಾಜೀನಾಮೆ!

ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆ ಕಸರತ್ತು ಜೋರಾಗಿ ನಡೆದಿದೆ. ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್​ ನಡುವೆ ಬಿರುಸುಗೊಂಡಿದ್ದು, ಕೇಂದ್ರದಲ್ಲಿ ಎನ್​ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದ ಸೇನೆ ಅಲ್ಲಿಂದ ಹೊರಬಂದಿದೆ.

ಅರವಿಂದ್ ಸಾವಂತ್​

ಮುಂಬೈ:ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ರಾಜಕಾರಣ ಪ್ರತಿ ಕ್ಷಣವೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸರ್ಕಾರ ರಚನೆ ಮಾಡಲು ಅಲ್ಲಿನ ರಾಜ್ಯಪಾಲ ಭಗತ್​ ಸಿಂಗ್​ ಕೋಶಿಯಾರಿ ಶಿವಸೇನೆಗೆ ಆಹ್ವಾನ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದಲ್ಲಿ ಬಿಜೆಪಿ-ಶಿವಸೇನೆ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದೆ. ಶಿವಸೇನಾ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್​ ಸಾವಂತ್​ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅರವಿಂದ್ ಸಾವಂತ್​ ರಾಜೀನಾಮೆ

ಇದೇ ವೇಳೇ ಮಾತನಾಡಿರುವ ಅವರು ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗಲಿದ್ದು, ಚುನಾವಣೆಗೂ ಮುಂಚಿತವಾಗಿ ಬಿಜೆಪಿ ನಮ್ಮೊಂದಿಗೆ ಮಾಡಿಕೊಂಡಿದ್ದ ಸೂತ್ರದಂತೆ ನಡೆದುಕೊಳ್ಳದೇ ಮೋಸ ಮಾಡಿದೆ ಎಂದು ದೂರಿದರು.

ಈಗಾಗಲೇ ಎನ್​ಸಿಪಿ ಮುಖಂಡ ಶರದ್​ ಪವಾರ್​ ಜತೆ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಮಹತ್ವದ ಮಾತುಕತೆ ನಡೆಸಿದ್ದು, ಸಂಜೆ ಕಾಂಗ್ರೆಸ್​ ಸಹ ಸಭೆ ಸೇರಲು ನಿರ್ಧರಿಸಿದೆ. ಇದಾದ ಬಳಿಕ ಮೂರು ಪಕ್ಷಗಳು ಸೇರಿ ಮಹತ್ವದ ನಿರ್ಧಾರ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ. 288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105,ಶಿವಸೇನೆ 56, ಎನ್​ಸಿಪಿ 54 ಹಾಗೂ ಕಾಂಗ್ರೆಸ್​ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಆಸ್ಪತ್ರೆಗೆ ರಾವತ್​ ದಾಖಲು:ಮಹಾರಾಷ್ಟ್ರದ ರಾಜಕೀಯ ಜಟಾಪಟಿ ನಡುವೆ ಶಿವಸೇನೆ ಮುಖಂಡ ಸಂಜಯ್​ ರಾವತ್​ ಆಸ್ಪತ್ರೆಗೆ ದಾಖಲಾಗಿದ್ದು, ಲಿಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Last Updated : Nov 11, 2019, 4:40 PM IST

ABOUT THE AUTHOR

...view details